ಒಟ್ಟು ಎಂಟು ದೃಶ್ಯಗಳನ್ನು ಒಳಗೊಂಡಂತಹ ನಾಟಕ ಯಮನ ಸೋಲು. ಇದೊಂದು ಪುರಾಣ ಆಧಾರಿತ ಕಥೆಯ ನಾಟಕ ರೂಪ. ಸಾವಿತ್ರಿ ಹಾಗೂ ಸತ್ಯವಾನ್ ಅವರ ಕಥೆಯನ್ನು ಆಧಾರಿಸಿ ಬರೆದಂತಹ ನಾಟಕ ಇದು. ಪೀಠಿಕಾ ದೃಶ್ಯ, ಉಪಸಂಹಾರ ದೃಶ್ಯವನ್ನು ಒಳಗೊಂಡು ಈ ನಾಟಕದಲ್ಲಿ ಎಂಟು ದೃಶ್ಯಗಳನ್ನು ರಚಿಸಲಾಗಿದೆ. ಈ ನಾಟಕದಲ್ಲಿ ಸಾವಿತ್ರಿಯ ನಿಷ್ಕಲ್ಮಷ ಪ್ರೀತಿ ಯಾವ ರೀತಿ ತನ್ನ ಪತಿಯ ರಕ್ಷಣೆಯನ್ನು ಮಾಡುತ್ತದೆ ಎಂಬುದರ ವಿವರವಿದೆ. ಸಾವಿತ್ರಿ ತನ್ನ ಪತಿಯನ್ನು ಉಳಿಸಿಕೊಳ್ಳಲು ಯಾವ ರೀತಿ ಪರಿತಪಿಸುತ್ತಾಳೆ? ಅವಳ ಪ್ರೀತಿ ಎಷ್ಟು ನಿಷ್ಕಲ್ಮಷವಾಗಿರುತ್ತದೆ? ಆ ನಿಷ್ಕಲ್ಮಷ ಪ್ರೀತಿ ಯಮನಿಂದ ಯಾವ ರೀತಿ ಸತ್ಯವಾನನ ಪ್ರಾಣವನ್ನು ಉಳಿಸುತ್ತದೆ? ಯಾಕೆ ಯಮ ತನ್ನ ಉದ್ದೇಶವನ್ನು ಈಡೇರಿಸುವಲ್ಲಿ ಸೋಲುತ್ತಾನೆ? ಎಂಬುದನ್ನು ಕಲಾತ್ಮಕವಾಗಿ ಈ ನಾಟಕದಲ್ಲಿ ಲೇಖಕರಾದ ಕುವೆಂಪು ಅವರು ವಿವರಿಸುತ್ತಾ ಹೋಗುತ್ತಾರೆ. ಯಮ ಧರ್ಮರಾಜ ಮತ್ತು ಸಾವಿತ್ರಿಯ ನಡುವೆ ನಡೆಯುವ ಸಂವಾದ ಈ ನಾಟಕದ ಪ್ರಮುಖ ಭಾಗ. ತನ್ನ ಇನಿಯನ ಪ್ರಾಣವನ್ನು ಉಳಿಸಿಕೊಳ್ಳಲು ಯಮನೊಂದಿಗೆ ವಾದಕ್ಕೆ ಇಳಿಯುವ ಸಾವಿತ್ರಿ ಯಾವ ರೀತಿ ತನ್ನ ಪತಿಯ ಪ್ರಾಣವನ್ನು ಯಮನ ವಶಕ್ಕೆ ನೀಡುವುದನ್ನು ಕ್ಷಣಕಾಲಕ್ಕೆ ತಡೆಯುತ್ತಾಳೆ ಎಂಬುದನ್ನು ಸ್ವಾರಸ್ಯಕರವಾಗಿ ಈ ನಾಟಕದಲ್ಲಿ ವರ್ಣಿಸಲಾಗಿದೆ.
©2024 Book Brahma Private Limited.