‘ಮತ್ತೊಬ್ಬ ರಾಧೆ’ ಲೇಖಕ ಬಸವರಾಜ ಸಬರದ ಅವರ ನಾಟಕ. 18ನೇ ಶತಮಾನದ ಕೀರ್ತನಕಾರ್ತಿ ಗಲಗಲಿ ಅವ್ವನವರನ್ನು ಕುರಿತದ್ದಾಗಿದೆ. ಬಾಗಲಕೋಟಿ ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿಯಲ್ಲಿ ಪ್ರಸಿದ್ಧ ಪಂಡಿತರಾಗಿದ್ದ ಗಲಗಲಿ ಮುದಗಲ್ಲಾಚಾರ್ಯರ ಕಿರುಪತ್ನಿಯಾಗಿ ರಮಾ ತಮ್ಮ 12 ವಯಸ್ಸಿನಲ್ಲೇ ಮದುವೆಯಾಗಿ ಗಲಗಲಿಗೆ ಬಂದಿದ್ದರು. ಮದುವೆಯಾದ ಎಂಟೇ ದಿನಕ್ಕೆ ವಿಧವೆಯಾದಳು. ವಿಧವೆಯಾಗಿ ಬತ್ತಿ ಹೊಸೆಯದೇ, ನ್ಯಾಯಪಂಡಿತಳಾಗಿ ಪೇಶ್ವೆ ಅರಸರ ಪಂಡಿತರನ್ನು ಸೋಲಿಸಿ, ಪುಣೆಯ ಅರಸರಿಂದ ವರ್ಷಾಶನ ಪಡೆದಳು. ಅವ್ವನವರ ಮುನ್ನೂರು ಕೀರ್ತನೆಗಳು ಪ್ರಕಟವಾಗಿವೆ. ಕನ್ನಡದಲ್ಲಿ ಕೀರ್ತನೆ ರಚಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಗಲಗಲಿ ಅವ್ವ ಸಾಕ್ಷಿಯಾಗಿದ್ದಾರೆ.
ಪುಟ್ಟ ವಿಧವೆಯಾಗಿ ಕಾಣಿಸಿಕೊಂಡ ಈ ಮಹಿಳೆ ಗಲಗಲಿ ಅವ್ವನಾಗಿ ಬೆಳೆದು ನಿಂತಿದ್ದು, ಅಧ್ಯಾತ್ಮ ಮತ್ತು ಸಾಹಿತ್ಯದಲ್ಲಿ ಮಹತ್ತರ ಸಾಧನೆ ಮಾಡಿದ್ದು ಈಗ ಚರಿತ್ರೆಗೆ ಸೇರಿದ ವಿಷಯವಾಗಿದೆ. ಈಕೆಯ ಬದುಕು- ಬರೆಹಗಳ ಮೇಲೆ ಬೆಳಕು ಚೆಲ್ಲುವ ಕೃತಿ ಇದು
©2024 Book Brahma Private Limited.