1930ರಲ್ಲಿ ಮೊದಲ ಬಾರಿಗೆ ಈ ನಾಟಕವು ಪ್ರಕಟವಾಯಿತು. ನಂತರದ ವರ್ಷಗಳಲ್ಲಿ ಹಲವು ಬಾರಿ ಈ ನಾಟಕವು ಮರುಮುದ್ರಣಗಳನ್ನು ಕಂಡಿದೆ. ಒಂಬತ್ತು ನೋಟಗಳನ್ನು ಹೊಂದಿರುವ ನನ್ನ ಗೋಪಾಲ ನಾಟಕ ಕುವೆಂಪು ಅವರು ಬರೆದಿರುವಂತಹ ಎರಡನೇಯ ಮಕ್ಕಳ ನಾಟಕ. ಈ ನಾಟಕವು ಒಂಬತ್ತು ಪಾತ್ರಗಳನ್ನು ಹೊಂದಿದೆ. ಶ್ರೀ ಕೃಷ್ಣನನ್ನು ಪೂಜಿಸುತ್ತಾ ಬಂದಿರುವ ಓರ್ವ ವಿಧವೆಯ ಕುಟುಂಬದ ಸುತ್ತ ನಾಟಕವು ಬರೆಯಲಾಗಿದೆ. ಯಾವ ರೀತಿ ಕೃಷ್ಣನನ್ನು ತಮ್ಮ ದೈನಂದಿನ ಜೀವನದಲ್ಲಿ ನೆನೆಯುತ್ತಾ ದಿನ ಕಳೆಯಬಹುದು ಎಂಬುದರ ಉತ್ತಮ ನಿದರ್ಶನವಾಗಿ ಈ ನಾಟಕವು ನಿಲ್ಲುತ್ತದೆ. ಶಾಲೆಗೆ ಹೋಗುವ ಹುಡುಗ ಗೋಪಾಲನೊಂದಿಗೆ ಬನದಲ್ಲಿರುವ ಗೋಪಾಲನ (ಕೃಷ್ಣ) ನಡುವೆ ನಡೆಯುವ ಸಂಭಾಷಣೆ ಓದುಗರ ಮನಸ್ಸಿಗೆ ಮುದ ನೀಡುತ್ತದೆ. ನಿರ್ಮಲ ಮನಸ್ಸು ಮತ್ತು ಮುಗ್ದತೆ ಯಾವ ರೀತಿ ಮನುಷ್ಯರನ್ನು ದೇವರಿಗೆ ಹತ್ತಿರದವರನ್ನಾಗಿ ಮಾಡುತ್ತದೆ ಮತ್ತು ನಿರ್ಮಲ ಮನಸ್ಸಿನ ಮಕ್ಕಳು ದೇವರಿಗೆ ಯಾಕೆ ಬಹಳ ಇಷ್ಟ ಎಂಬುದನ್ನು ಈ ನಾಟಕವು ಬಹಳ ಸುಂದರವಾಗಿ ವರ್ಣಿಸುತ್ತದೆ. ನಿಜವಾದ ಭಕ್ತಿಯಿಂದ ದೇವರು ಹೇಗೆ ಪ್ರಸನ್ನನಾಗುತ್ತಾನೆಂಬುದರ ವಿವರಣೆಯೂ ಈ ನಾಟಕದಲ್ಲಿ ಕಾಣಬಹುದು.
©2024 Book Brahma Private Limited.