‘ಬೆಗ್ ಬಾರೋ ಅಳಿಯ’ ಮತ್ತು ಇತರ ನಾಟಕಗಳು ಕೃತಿಯು ಎಂ.ಎಸ್. ನರಸಿಂಹಮೂರ್ತಿ ಅವರ ಹಾಸ್ಯ ನಾಟಕ ಸಂಕಲನವಾಗಿದೆ. ಈ ಕೃತಿಗೆ ಸಿಹಿ ಕಹಿ ಚಂದ್ರು ಅವರ ಬೆನ್ನುಡಿ ಬರಹವಿದ್ದು. ಕೃತಿಯ ಕುರಿತು ತಿಳಿಸುತ್ತಾ 'ಬೆಗ್ ಬಾರೋ ಅಳಿಯ' ನಾಟಕ ಈಗಾಗಲೇ ಟೈಮ್ ಟೆಸ್ಟೆಡ್ ಕಾಮಿಡಿಯಾಗಿದೆ. 'ವಸುಧೈವ ಕುಟುಂಬಕಂ' ಎಂಬ ಉಪನಿಷತ್ ವಾಕ್ಯದಂತೆ ಕೂಡು ಕುಟುಂಬದ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. 'ಸ್ತ್ರೀ ಭ್ರೂಣಹತ್ಯೆ ತಡೆಯುವ ಬಗ್ಗೆ ಇರುವ ಗಂಭೀರ ಚರ್ಚೆಗೆ ಹಾಸ್ಯಲೇಪನ ಮಾಡಲಾಗಿದೆ. ಸರಳ ರಂಗಸಜ್ಜಿಕೆ ಇರುವ ಇವರ ನಾಟಕಗಳನ್ನು ಸುಲಭವಾಗಿ ಅಭಿನಯಿಸಬಹುದು. 'ಸಂಭವಾಮಿ ಯುಗೇ ಯುಗೇ ಒಂದು ರಾಜಕೀಯ ವಿಡಂಬನೆ, ಧರ್ಮದ ಅವನತಿಯಾದಾಗ ಒಳ್ಳೆಯ ರಾಜಕಾರಣಿ ಹುಟ್ಟಿ ಬಂದು ಸುಧಾರಣೆ ತರುತ್ತಾನೆ ಎಂಬ ಆಶಯ ಇಲ್ಲಿದೆ. ಸಸ್ಪೆನ್ಸ್ ಥಿಲ್ಲರ್ ರೀತಿಯಲ್ಲಿ ನಾಟಕ ಪ್ರದರ್ಶಿಸಬಹುದು. ಹಳ್ಳಿ ಪೆದ್ದಿ ನಾಯಕಿ 'ಮಲ್ಲಿಕಾ ಶರಬತ್' ಪಾತ್ರ ಪ್ರತಿ ಎಂಟ್ರಿಯಲ್ಲೂ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಅಪಾಯವಿದೆ. 'ನೀ ನನಗಿದ್ದರೆ ನಾ ನಿನಗೆ' ನಾಟಕದಲ್ಲಿ ಇಂದಿನ ವೃದ್ಧಾಶ್ರಮಗಳಿಗೆ ಕಾರಣವೇನು ಎಂಬ ಬಗ್ಗೆ ಗಂಭೀರ ಚಿಂತನೆ ಇದೆ. ಹಸು ಹಾಲು ಕರೆಯುವುದು ನಿಲ್ಲಿಸಿದಾಗ, ನಿವೃತ್ತ ತಂದೆ ದುಡಿಯುವುದನ್ನು ನಿಲ್ಲಿಸಿದಾಗ ಮನೆಮಂದಿ ಯಾವ ರೀತಿ ಅವರನ್ನು ಕಾಣುತ್ತಾರೆ ಎಂಬುದು ಈ ನಾಟಕದ ವಸ್ತು. ಇಲ್ಲಿ ಬರುವ ಹಸು ಪಾತ್ರ ಪ್ರೇಕ್ಷಕರನ್ನು ರಂಜಿಸುತ್ತದೆ. ಮುಖ್ಯವಾಗಿ ಮಕ್ಕಳ ಮನಸ್ಸನ್ನು ಸೂರೆಗೊಳ್ಳುತ್ತದೆ. ಓದುವಾಗಲೇ ಸಾಕಷ್ಟು ನಗೆ ಎಬ್ಬಿಸುವ ಈ ನಾಟಕಗಳನ್ನು ಸಮರ್ಥ ರೀತಿಯಲ್ಲಿ ರಂಗಕ್ಕೆ ಅಳವಡಿಸಿದರೆ ನಾನ್ ಸ್ಟಾಪ್ ನಗೆ ಸಿಗುವುದಂತೂ ಗ್ಯಾರಂಟಿ. ಹಾಸ್ಯದ ಜೊತೆಗೆ ಸಮಾಜಕ್ಕೆ ಗಟ್ಟಿ ಸಂದೇಶ ರವಾನೆ ಆಗುತ್ತದೆ ಎಂದಿದ್ದಾರೆ.
ಹಾಸ್ಯ ಬರಹಗಾರ, ಬಾಷಣಕಾರ ಎಂ.ಎಸ್.ನರಸಿಂಹಮೂರ್ತಿ ಅವರು ಕೋಲಾರ ಜಿಲ್ಲೆಯ ಮಾಲೂರಿನಲ್ಲಿ 1949 ಅಕ್ಟೋಬರ್ 20 ರಂದು ಜನಿಸಿದರು. ಕಾದಂಬರಿ, ಮಕ್ಕಳಸಾಹಿತ್ಯ, ವಿಚಾರ ಸಾಹಿತ್ಯ, ಹಾಸ್ಯ ಸಂಕಲನ ಸೇರಿದಂತೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಛಾಪು ಮೂಡಿಸಿರುವ ಇವರು ಇದುವರೆಗೆ 50 ಪುಸ್ತಕಗಳನ್ನು ಬರೆದಿದ್ದಾರೆ. 5000 ಕ್ಕೂ ಹೆಚ್ಚು ನಗೆ ಎಪಿಸೋಡ್‌ಗಳನ್ನು ರಚಿಸಿದ ರಾಷ್ಟ್ರೀಯ ದಾಖಲೆ ಅವರದು. 2000ಕ್ಕೂ ಹೆಚ್ಚು ಪ್ರಕಟಿತ ನಗೆ ಲೇಖನಗಳು, 100ಕ್ಕೂ ಹೆಚ್ಚು ಬಾನುಲಿ ನಾಟಕಗಳ ರಚನೆ. ಸ್ವಯಂ ವಧು, ಶ್ರಮದಾನ, ಬಾಬ್ಬಿ, ಗೂಳಿಕಾಳಗ, ಕಂಡಕ್ಟರ್ ಕರಿಯಲಪ್ಪ, ವೈಕುಂಠಕ್ಕೆ ಬುಲಾವ್, ಕಿವುಡು ಸಾರ್ ಕಿವುಡು ಮತ್ತು ಇತರೆ ...
READ MORE