ನಾಟಕಕಾರ ಮಲ್ಲಿನಾಥ ಜಿ. ಆಲೇಗಾಂವ್ ಮಾಶಾಳ ಅವರು ರಚಿಸಿದ ಕೌಟುಂಬಿಕ ನಾಟಕ-ಸತ್ಯ ಸಾಯಲಿಲ್ಲ, ಸುಳ್ಳು ಉಳಿಯಲಿಲ್ಲ. ಕೊನೆಗೂ ಗೆಲ್ಲುವುದು ಸತ್ಯವೇ ಹೊರತು ಸುಳ್ಳು ಅಲ್ಲ. ಆದರೆ, ಪ್ರತಿ ದಿನವೂ ಸುಳ್ಳಿನ ಅಟ್ಟಹಾಸ ನೋಡಿ ಸುಳ್ಳೇ ಗೆಲ್ಲುತ್ದೆ ಎಂದು ಅವಸರದ ತೀರ್ಮಾನ ಮಾಡಿ ಬಿಡುತ್ತೇವೆ. ಮನಸ್ಸಿನಲ್ಲಿ ಪ್ರಾಮಾಣಿಕತೆಯಿಂದ ಇದ್ದರೆ ಕೊನೆಗೆ ಸತ್ಯ ಗೆಲ್ಲುತ್ತದೆ ಎಂಬ ಆತ್ಮವಿಶ್ವಾಸ ಇರುತ್ತದೆ. ಸುಳ್ಳು ತನ್ನ ಸೋಲೋಪ್ಪಿಕೊಂಡು ಮುಖ ತೋರಿಸದೇ ಅಲ್ಲಿಂದ ಕಾಲು ಕೀಳುತ್ತದೆ. ಇದು ವಾಸ್ತವ. ಇಂತಹ ಕಥಾ ವಸ್ತುವಿರುವ ಈ ನಾಟಕವು ಸಂಭಾಷಣೆ ದೃಷ್ಟಿಯಿಂದಲೂ ಸರಳವಾಗಿದೆ. ಪಾತ್ರಗಳ ಸೃಷ್ಟಿಯೂ ಸುಂದರವಾಗಿದೆ. ಸನ್ನಿವೇಶಗಳ ಜೋಡಣೆಯಲ್ಲಿ ಕಲಾತ್ಮಕತೆ ಮೆರೆಯಲಾಗಿದೆ.
ಕವಿ: ಮಲ್ಲಿನಾಥ್ ಆಲೇಗಾಂವ್ ಅವರು ಮೂಲತಃ ಕಲಬುರಗಿ ಜಿಲ್ಲೆ ಆಫಜಲಪುರ ತಾಲೂಕಿನ ಮಾಶಾಳ ಗ್ರಾಮದವರು. ತಂದೆ ಗುರಣ್ಣ ಆಲೇಗಾಂವ. ತಾಯಿ ಲಕ್ಷ್ಮೀಬಾಯಿ. ಸ್ವಗ್ರಾಮದಲ್ಲಿ ಏಳನೇ ತರಗತಿಯವರಿಗೆ ಅಭ್ಯಾಸ ಮಾಡಿದವರು. ಸೊಲ್ಲಾಪುರದ ಸಿದ್ದರಾಮೇಶ್ವರ ನಾಟ್ಯಸಂಘದ ಸ್ಥಾಪಕರು. ಸೊಲ್ಲಾಪುರದ ಸುಯೋಧನ ಕನ್ನಡ ಸಂಘದ ಕಾರ್ಯದರ್ಶಿ, ಮಾಶಾಳದ ಚೌಡೇಶ್ವರಿ ನಾಟ್ಯಸಂಘದ ಸಂಸ್ಥಾಪಕರು. ಮಾಶಾಳದ ಸರ್ಕಾರಿ ಪ್ರಾಥಮಿಕ ಶಾಲಾ ನಿರ್ದೇಶಕರು, ಕರ್ಜಿಗಿ ವಲಯದ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಅಧ್ಯಕ್ಷರು, ಕಲಬುರಗಿ ಜಿಲ್ಲೆ ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಗ್ರಾಮ ಸೇನಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಕರ್ಜಿಗಿ ವಲಯದ ಸಾಹಿತ್ಯ ಸಮ್ಮೇಳನದ ಗೌರವ ...
READ MORE