ಆ ಮನಿ

Author : ಕೀರ್ತಿನಾಥ ಕುರ್ತಕೋಟಿ

Pages 108

₹ 40.00




Year of Publication: 2011
Published by: ಕನ್ನಡ ಮತ್ತು ಸಂಸ್ಕೃತಿ ಇಲಾಖೆ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು

Synopsys

ವಿಮರ್ಶಕ ಕೀರ್ತಿನಾಥ ಕುರ್ತಕೋಟಿ ಅವರು ಬರೆದ ನಾಟಕ ಕೃತಿ-ಆ ಮನಿ. ಮಕ್ಕಳ ಜೀವನದಲ್ಲಿಯ ಕೆಲವು ಸನ್ನಿವೇಶಗಳನ್ನು ರೂಪಿಸುವ ನಾಟಕವಾಗಿದ್ದರೂ ಕೂಡ ಅದೇ ಅದರ ಉದ್ದೇಶವಲ್ಲ. ಜೀವನಕ್ಕೆ ಜೀವನವೇ ಇಲ್ಲಿ ಸಂಕೇತವಾಗಿದೆ. ವಾಸ್ತವತೆಯ ಅದ್ಭುತ ರಮ್ಯತೆಯನ್ನು ತೆರೆದು ತೋರುವ ಪ್ರಯತ್ನವನ್ನು ಮಾಡಲಾಗಿದೆ. ಜೀವನದಲ್ಲಿ ಕಾಣುವ ಸತ್ಯದ ಪರಿಗಳನ್ನು ಒಂದೊಂದಾಗಿ ಬಿಚ್ಚಿ ನೋಡಿದಾಗ ಕೊನೆಗೆ ಅನಿರ್ವಚನೀಯವಾದ ಗೂಢವೊಂದೇ ಉಳಿಯುತ್ತದೆ. ಮಕ್ಕಳ ಜೀವನದಲ್ಲಿ, ಆಟಗಳಲ್ಲಿ, ಉತ್ಸಾಹದಲ್ಲಿ, ಅನುಕರಣದಲ್ಲಿ ಮನುಕುಲದ ಹೃದಯ ಸ್ಪಂದನ ಕೇಳುತ್ತಿದೆ. ಇತಿಹಾಸದ ಫಲವಾಗಿ, ಭವಿಷ್ಯದ ಬೀಜವಾಗಿರುವ ಶೈಶವದ ಅಲೌಕಿಕ ಸೌಂದರ್ಯವನ್ನು ಸೆರೆಹಿಡಿಯುವ ಸಾಹಸ ಈ ನಾಟಕದಲ್ಲಿದೆ.

About the Author

ಕೀರ್ತಿನಾಥ ಕುರ್ತಕೋಟಿ
(12 October 1928)

ಕವಿ, ನಾಟಕಕಾರ, ವಿಮರ್ಶಕ, ಅನುವಾದಕ, ಅಂಕಣಕಾರ ಕೀರ್ತಿನಾಥ ಕುರ್ತಕೋಟಿ ಅವರು  12-10-1928ರಂದು ಗದಗಿನಲ್ಲಿ ಜನಿಸಿದರು. ತಂದೆ ಡಿ.ಕೆ.ಕುರ್ತಕೋಟಿ, ತಾಯಿ-ಪದ್ಮಾವತಿಬಾಯಿ. ಕೆಲಕಾಲ ಗದಗಿನ ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಕುರ್ತಕೋಟಿಯವರು, ಸ್ನಾತಕೋತ್ತರ ಪದವಿಯನ್ನು ಪಡೆದು, ಗುಜರಾತಿಗೆ ತೆರಳಿ ಅಲ್ಲಿ ಕಾಲೇಜು ಉಪನ್ಯಾಸಕರಾಗಿ ವೃತ್ತಿಯನ್ನು ಕೈಗೊಂಡರು. ಅಲ್ಲಿ ನಿವೃತ್ತಿಯನ್ನು ಪಡೆದ ನಂತರವೇ ಧಾರವಾಡಕ್ಕೆ ಮರಳಿದರು. ಜಿ.ಬಿ.ಜೋಶಿಯವರ ಮನೋಹರ ಗ್ರಂಥಮಾಲೆಗೆ ಮೊದಲಿನಿಂದಲೂ ಸಾಹಿತ್ಯ ಸಲಹಾಕಾರರಾಗಿದ್ದರು. ಜೊತೆಗೆ ಪ್ರಜಾವಾಣಿಯಲ್ಲಿ ವಾರವಾರವೂ ಪ್ರಕಟವಾಗುತ್ತಿದ್ದ "ಉರಿಯ ನಾಲಗೆ" ಎಂಬ ಅಂಕಣ ಬಹಳ ಜನಪ್ರಿಯವಾಗಿತ್ತು. 1959ರಲ್ಲಿ ಮನೋಹರ ಗ್ರಂಥಮಾಲೆ ಹೊರತಂದ ತನ್ನ ರಜತ ವರ್ಷದ ಹೊತ್ತಿಗೆ “ನಡೆದು ...

READ MORE

Related Books