ಸೂಳೆ ಸಂಕವ್ವ ಮುದೇನೂರ ಸಂಗಣ್ಣ ಅವರ ನಾಟಕವಾಗಿದೆ. ಧಾರ್ಮಿಕ ವಲಯದಲ್ಲಿ ದೇವದಾಸಿ, ಚಾತುರ್ವರ್ಣ ವ್ಯವಸ್ಥೆಯ ವೇಶ್ಯ, ಜಾನಪದ ಲೋಕದಲ್ಲಿ ಸೂಳೆಯಾಗಿ ಶತಮಾನಗಳಿಂದ ಮಹಿಳೆಯ ಪಾಲಿಗೆ ಶಾಪವಾದ ಒಂದು ಅನಿಷ್ಟ ಪದ್ಧತಿಯ ನಾನಾ ಮುಖಗಳು ಈ ನಾಟಕದಲ್ಲಿ ಅನಾವರಣಗೊಂಡಿವೆ. ಇಲ್ಲಿನ ಸಂಕವ್ವ ಪಾತ್ರದ ಮಾನವೀಯ ನೆಲೆಯುಳ್ಳ ಮಾತುಗಳಿಗೆ ಕವಡೆಯ ಬೆಲೆಯಾದರೂ ಬಂದಾಗ ಆಕೆಯ ಸ್ಥಿತಿ ಸುಧಾರಣೆ ಕಂಡೀತು. ಅಲಕ್ಷಿತ ಶಿವಶರಣೆಯೋರ್ವಳ ವಚನಾಧಾರಿತ ನಾಟಕ.
ಅವಿಭಜಿತ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದವರು.ತಂದೆ ಕೊಟ್ರಬಸಪ್ಪ. ದೊಡ್ಡ ಜಮೀನುದಾರರು. ರಾಷ್ಟ್ರೀಯವಾದಿ. ಮದನಪಲ್ಲಿಯ ಥಿಯಾಸಫಿ ಕಾಲೇಜಿನಲ್ಲಿ ಓದು ಆರಂಭವಾಗಿ, ತೆಲುಗು ಕಲಿಯಲು ಅವಕಾಶ ಸಿಕ್ಕಿತ್ತು.ಮಹರ್ಷಿ ಆರವಿಂದರ ತತ್ವಗಳೆಡೆಗೆ ಒಲವು ಬೆಳೆಸಿಕೊಂಡಿದ್ದು ಬ್ರಹ್ಮಚಾರಿಯಾಗೇ ಉಳಿಯಲು ನಿಧರಿಸಿದ್ದು, ತಂದೆಯ ಒತ್ತಾಯದ ಮೇರೆಗೆ ಮದುವೆಯಾದರು. ಮುಂದೆ ತಂಬಾಕಿನ ವ್ಯಾಪಾರದಿಂದ ನಿಪ್ಪಾಣಿಯ ಸಂಪರ್ಕ ಬಂದು ಮರಾಠಿಯೂ ಕಲಿತರು. ಚಿಗಟೇರಿ ಗ್ರಾ.ಪಂ. ಅಧ್ಯಕ್ಷರೂ ಆಗಿದ್ದರು. ತಾಲೂಕು ಮಂಡಳಿ ಸದಸ್ಯರೂ ಆಗಿದ್ದರು. ವಿಧಾನಸಭೆಗೆ ಸ್ಪರ್ಧಿಸಿ ( 1962) ಸೋತರು. ಜಾನಪದ ಸಾಹಿತ್ಯದತ್ತ ಒಲವು ಬೆಳೆಯುತ್ತಾ ಹೋಗಿ, ಕರ್ನಾಟಕ ಜಾನಪದ ಹಾಗೂ ಯಕ್ಷಗಾನ ಅಕಾಡೆಮಿ ಸದಸ್ಯರೂ ಆಗಿದ್ದರು. ಬಳ್ಳಾರಿ ...
READ MORE