‘ಹೊಸಬಳು ಈ ಸದಾರಮೆ’ ಎನ್.ಸಿ. ಮಹೇಶ್ ಅವರ ಮೂರು ನಾಟಕಗಳ ಸಂಕಲನವಾಗಿದೆ. ಲೇಖಕ ನಾಟಕದ ಕುರಿತು ಕೆಲವೊಂದು ವಿಚಾರವನ್ನು ಹೀಗೆ ಹೇಳುತ್ತಾರೆ; ರಂಗದ ಕಾಯಕ ಎನ್ನುವುದೊಂದು ವಿಶಿಷ್ಟ ಬಗೆಯ ಸೆಳವು; ಏರುತ್ತಲೇ ಹೋಗುವ ನಶೆಯ ಹಾಗೆ. ಇದರ ಸೆಳವಿಗೆ ಸಿಕ್ಕವರಿಗಷ್ಟೇ ಇದರ ಅಂದ ಚೆಂದ, ಬೆರಗು ಮತ್ತು ಕಟು ವಾಸ್ತವಗಳು ಅರಿವಿಗೆ ನಿಲುಕಿರುತ್ತವೆ. ಆದರೆ ಹೊರಗಿನಿಂದ ವಿಚಿತ್ರವಾಗಿ ಚಿತ್ರತವಾಗುತ್ತಿರುತ್ತದೆ. ಆ ಎಲ್ಲರಿಗೆ ರಂಗದ ಮೇಲಿನ ಭವ್ಯತೆ ಕಾಣುತ್ತಿರುತ್ತದೆಯೇ ಹೊರತು ಅದರ ಹಿಂದಿನ ಕಟ್ಟುಪಾಡುಗಳಲ್ಲ. ಇನ್ನು ನಾನು ಇಲ್ಲಿ ‘ಕಟ್ಟುಪಾಡು’ ಎಂದು ಕರೆದಿರುವುದಕ್ಕೆ ಕಾರಣಗಳಿವೆ. ಎಂದಿನಿಂದಲೂ ಅಷ್ಟೇ, ರಂಗದಲ್ಲಿ ಹಲವರು ಹಲವು ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಾನು ಆರಿಸಿಕೊಂಡಿದ್ದು ನಾಟಕ ‘ಬರೆಯುವ’ ಕಾಯಕ. ಇದರ ಸೆಳವು ಹೇಗೆ ಅಂದರೆ ತೆಪ್ಪದಲ್ಲಿ ಕೂತವನು ಅನಿವಾರ್ಯವಾಗಿ ಹುಟ್ಟುಹಾಕುತ್ತಲೇ ಸಾಗಬೇಕು, ಇಲ್ಲದಿದ್ದರೆ ಗತ್ಯಂತರವಿಲ್ಲ ಎನ್ನುವ ಬಗೆಯದು. ನಾಟಕವೊಂದು ರಂಗದ ಮೇಲೆ ಯಶಸ್ವಿಯಾದರೆ ಮತ್ತೆ ಮತ್ತೆ ನಾಟಕ ಬರೆಯುವ ಉಮೇದು ಹುಟ್ಟುತ್ತದೆ.
©2024 Book Brahma Private Limited.