ಚಾರ್ವಾಕ

Author : ಸತ್ಯನಾರಾಯಣರಾವ್ ಅಣತಿ

Pages 72

₹ 40.00




Year of Publication: 2008
Published by: ನವಕರ್ನಾಟಕ ಪ್ರಕಾಶನ
Address: 101, ಎಂಬಸಿ ಸೆಂಟರ್, ಕ್ರೂಸೆಂಟ್ ರಸ್ತೆ, ಕುಮಾರ್ ಪಾರ್ಕ್ ಈಸ್ಟ್, ಬೆಂಗಳೂರು - 560 001
Phone: 08022203580/01

Synopsys

‘ಚಾರ್ವಾಕ’ ಹಿರಿಯ ಲೇಖಕ ಸತ್ಯನಾರಾಯಣರಾವ್ ಅಣತಿ ಅವರು ರಚಿಸಿರುವ ನಾಟಕ. ಎಡಪಂಥೀಯ ವಿಚಾರವನ್ನು ಆಚರಣೆಗಳಲ್ಲಿ ತರಲು ಇಂದಿಗೂ ಸೋಲುತ್ತಿರುವ ಸನ್ನಿವೇಶದಲ್ಲಿ ಈ ನಾಟಕ ಪ್ರಸ್ತುತವೆನ್ನಿಸುತ್ತದೆ. ಭಾಷಣ-ಬೋಧನೆಗಳಲ್ಲಷ್ಟೇ ಉಳಿದುಕೊಂಡಿರುವ ಸಮಾನತೆ-ಶೋಷಣೆರಹಿತ ಸಮಾಜವನ್ನು ನಿರ್ಮಿಸಲು ಸಾಧ್ಯವೇ ಎಂಬ ಚಿಂತನೆಯನ್ನು ಒಳಗೊಂಡಿರುವ ಕೃತಿ ಇದಾಗಿದೆ. ಸಭ್ಯರಂತೆ ಮುಸುಕು ಹಾಕಿಕೊಂಡಿರುವ ಅಪಾಯಕಾರಿ ವ್ಯಕ್ತಿ-ಶಕ್ತಿಗಳನ್ನು ನಾಸ್ತಿಕರೆಂದೆನಿಸಿಕೊಂಡ ಚಾರ್ವಾಕರು ಮುಖಾಮುಖಿಯಾಗುವುದು ಇಲ್ಲಿನ ವೈಶಿಷ್ಟ್ಯ, ನಾಟಕದ ಎರಡು ಮುಖ್ಯಪಾತ್ರಗಳು ದೇಶಸಂಚಾರ ಮಾಡುತ್ತ ಜನಜಾಗೃತಿ ಮೂಡಿಸುತ್ತವೆ. ಶತಮಾನಗಳಿಂದ ಜಡ್ಡುಕಟ್ಟಿದ ವ್ಯವಸ್ಥೆಯ ವಿರುದ್ಧ ಇದೊಂದು ಕ್ಷೀಣ ಧ್ವನಿಯಾಗಿದ್ದು ವಿಚಾರವಂತರಿಂದಾಗಿ ವೃದ್ಧಿಗೊಳ್ಳಬೇಕಾಗಿದೆ.

About the Author

ಸತ್ಯನಾರಾಯಣರಾವ್ ಅಣತಿ
(12 December 1935)

ಕವಿ, ನಾಟಕಕಾರ ಕೆ. ಸತ್ಯನಾರಾಯಣರಾವ್ ಅಣತಿ ಅವರು ಮೂಲತಃ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಅಣತಿ ಗ್ರಾಮದವರು. ತಂದೆ-ಎ.ಎನ್. ಮೂರ್ತಿರಾವ್, ತಾಯಿ-ಶ್ರೀಮತಿ ರತ್ನಮ್ಮ . 1935 ಡಿಸೆಂಬರ್ 12, ರಂದು ಜನಿಸಿದ ಅವರು ಹುಟ್ಟಿದ ಊರಾದ ಅಣತಿ, ತಿಪಟೂರು, ಹಾಸನ, ಬೆಂಗಳೂರು, ಧಾರವಾಡಗಳಲ್ಲಿ ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ ಸತ್ಯನಾರಾಯಣರಾವ್ ಸಾಹಿತ್ಯಿಕವಾಗಿಯೂ ತಮ್ಮನ್ನು ತೊಡಗಿಸಿಕೊಂಡು ಸಾಹಿತ್ಯ ಕ್ಷೇತ್ರದ ಹಲವು ವಿಭಾಗಳಲ್ಲಿ ಕೃಷಿಮಾಡಿದ್ದಾರೆ.  ಕೃತಿಗಳು: ನೀಲಕುರುಂಜಿ (ಆಯ್ದ ಕವಿತೆಗಳ ಸಂಕಲನ), ಪಾತ್ರಗಳು ಇರಲಿ ಗೆಳೆಯ, ತೆರಕೊಂಡ ಆಕಾಶ, ಕೃಷ್ಣ ಕಣ್ಣಿನ ನೋಟ, ಭೂಮಿ ಬದುಕಿನ ಗಂಧ, ...

READ MORE

Related Books