ಗಂಡಸರೇ ನಿಮಗೊಂದು ಸವಾಲ್

Author : ಎಂ.ಜಿ. ದೇಶಪಾಂಡೆ

Pages 140

₹ 100.00




Year of Publication: 2012
Published by: ಪೂಜಾ ಪ್ರಕಾಶನ
Address: ಬಚ್ಚಾ ಕಾಂಪ್ಲೆಕ್ಸ್, ಸಂಗಮ ಚಿತ್ರಮಂದಿರ ಬಳಿ, ಬೀದರ-585401
Phone: 9964511333

Synopsys

ಸಾಹಿತಿ ಡಾ. ಎಂ.ಜಿ. ದೇಶಪಾಂಡೆ ಅವರು ರಚಿಸಿದ ಸಾಮಾಜಿಕ ನಾಟಕ-ಗಂಡಸರೇ ನಿಮಗೆ ಸವಾಲ್ ಅಥವಾ ಪ್ರೀತಿ ತಂದ ಫಜೀತಿ. ಎರಡು ಗಂಟೆ ಅವಧಿಯ ನಾಟಕವಿದು. ಈ ನಾಟಕದಲ್ಲಿ ಸಾಮಾಜಿಕ ಅನ್ಯಾಯ ವ್ಯವಸ್ಥೆಯ ವಿರುದ್ಧ ಬಂಡೇಳುವುದು ಇದರ ಕಥಾ ವಸ್ತು. ಗೋಮುಖ ವ್ಯಾಘ್ರರ ಒಳ ಇಂಗಿತ ,ವರದಕ್ಷಿಣೆ ಪಿಡುಗುಗಳನ್ನು ತೋರ್ಪಡಿಸುವ ಜೊತೆಗೆ ವಿಧವಾ ವಿವಾಹಕ್ಕೆ ಪ್ರಾಶಸ್ತ್ಯ ನೀಡುವ, ಆದರ್ಶ ಮುಂತಾದ ವಿಚಾರಗಳನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ನಾಟಕ ರಚಿಸಲಾಗಿದೆ. ಕೇವಲ ಹತ್ತು ಪಾತ್ರಗಳಿವೆ. ದೃಶ್ಯಗಳು ಕಡಿಮೆ ಇವೆ. ಆದ್ದರಿಂದ, ಆಸಕ್ತರು ಈ ನಾಟಕ ಮಾಡುವುದು ಸುಲಭಗೊಳಿಸಿದೆ. ಸಮಾಜದ ಏಳು ಬೀಳುಗಳನ್ನು ಚಿತ್ರಿಸುವುದು ನಾಟಕದ ಮುಖ್ಯ ಉದ್ದೇಶವಾಗಿದೆ. ಇಲ್ಲಿನ ನಾಟಕದ ಪಾತ್ರಗಳು ಎಲ್ಲವೂ ಕಾಲ್ಪನಿಕ ಎಂದು ಲೇಖಕರು ಹೇಳಿಕೊಂಡಿದ್ದಾರೆ.

About the Author

ಎಂ.ಜಿ. ದೇಶಪಾಂಡೆ
(21 March 1952)

ಲೇಖಕ ಎಂ. ಜಿ. ದೇಶಪಾಂಡೆ (ಮಾಣಿಕರಾವ್ ಗೋವಿಂದರಾವ್ ದೇಶಪಾಂಡೆ) ಮೂಲತಃ  ಬೀದರನವರು. ಎಂ..ಫಿಲ್ ಹಾಗೂ ಪಿಎಚ್ ಡಿ ಪದವೀಧರರು.  ಇವರ ಕಾವ್ಯನಾಮ  ಲಕ್ಷ್ಮೀಸುತ. ಮಾಣಿಕ್ಯ ವಿಠಲ ಎಂಬುದು ಇವರ ವಚನಾಂಕಿತ. ತಂದೆ ಗೋವಿಂದರಾವ್ ದೇಶಪಾಂಡೆ, ತಾಯಿ ಲಕ್ಷ್ಮೀಬಾಯಿ ದೇಶಪಾಂಡೆ, ಸಹಕಾರ ಕೇಂದ್ರ ಬ್ಯಾಂಕಿನ ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ.  ಕನ್ನಡಾಂಬೆ ಮತ್ತು ಖ್ಯಾತಿ (1977) ಕನ್ನಡ ವಾರ ಪತ್ರಿಕೆಯ ಸಂಪಾದಕ ರಾಗಿದ್ದರು. ದೇಶಪಾಂಡೆ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರು, ಶಾಂತಿ, ಕನ್ನಡ ಗೆಳೆಯರ ಬಳಗ, ಬೀದರ ಜಿಲ್ಲಾ ಲೇಖಕರ ಬಳಗ, ಜ್ಞಾನ ತರಂಗ ವಿಚಾರ ವೇದಿಕೆ ಮುತ್ತಂಗಿ, ಮಂದಾರ ಕಲಾವಿದರ ವೇದಿಕೆ ಹೀಗೆ ಹಲವಾರು ಸಂಘಸಂಸ್ಥೆಗಳ ರೂವಾರಿಯಾಗಿದ್ದಾರೆ.  ಕೊರೊನಾ ವೈರಸ್ ಪರಿಣಾಮ ಲಾಕ್ ...

READ MORE

Related Books