‘ಕಂಪ್ಯೂಟರ್ ಸೇವಕ ಮತ್ತು ಇತರ ನಾಟಕಗಳು’ ಕೃತಿಯು ಪ್ರಕಾಶ್ ಕಂಬತ್ತಳ್ಳಿ ಅವರ ನಾಟಕಗಳ ಸಂಕಲನವಾಗಿದೆ. ಈ ಕೃತಿಯಲ್ಲಿನ ವಿಚಾರಗಳು ಹೀಗಿವೆ : ವೈಜ್ಞಾನಿಕ ನಾಟಕಗಳು ರಂಗಭೂಮಿಗಿಂತ ರೇಡಿಯೋ ಮಾಧ್ಯಮಕ್ಕೇ ಹೆಚ್ಚು ಹೊಂದಿಕೊಳ್ಳುತ್ತವೆ. ಎಚ್. ಜಿ.ವೆಲ್ಸ್ ಅವರ ವೈಜ್ಞಾನಿಕ ಕೃತಿಗಳು ರೇಡಿಯೋ ನಾಟಕಗಳಾಗಿ ಅಪಾರ ಪ್ರಭಾವ ಬೀರಿದ್ದನ್ನು ಅಂದಿನ ಶ್ರೋತೃಗಳು ಇಂದಿಗೂ ಮರೆಯುತ್ತಿಲ್ಲ. ಕನ್ನಡದಲ್ಲಿಯೂ ವೈಜ್ಞಾನಿಕ ರೇಡಿಯೋ ನಾಟಕಗಳ ಒಂದು ಪರಂಪರೆಯೇ ಬೆಳೆದು ಬಂದಿದೆ. ಕನ್ನಡ ಶ್ರೋತೃಗಳು ಅಷ್ಟೇ ಅಕ್ಕರೆಯಿಂದ ಈ ಪ್ರಕಾರವನ್ನು ಸ್ವಾಗತಿಸಿದ್ದಾರೆ. ಕಂಬತ್ತಳ್ಳಿಯವರ ಈ ನಾಟಕಗಳು ಈ ಬಗೆಯವು. ಇವು ಕೇವಲ ರೇಡಿಯೋ ನಾಟಕಗಳಾಗಿಲ್ಲ. ಓದು ನಾಟಕಗಳಾಗಿಯೂ ಗಮನ ಸೆಳೆಯುತ್ತವೆ. ನಾಲ್ಕು ಪ್ರಸಿದ್ಧ ವೈಜ್ಞಾನಿಕ ಕಥೆಗಳನ್ನು ರೇಡಿಯೋಗೆ ರೂಪಾಂತರಗೊಳಿಸಿದ ಯಶಸ್ವಿಯಾಗಿ ಪ್ರಸಾರಗೊಂಡ ನಾಟಕಗಳಾಗಿವೆ.
©2024 Book Brahma Private Limited.