‘ಜನನಾಯಕ’ ಪ್ರಕಾಶ್ ಗಿರಿಮಲ್ಲನವರ ನಾಟಕ ಕೃತಿಯಾಗಿದೆ. ಕೃತಿಯ ಬಗ್ಗೆ ಲೇಖಕರು ಹೀಗೆ ಹೇಳುತ್ತಾರೆ; ಜನನಾಯಕ ನಾಟಕ ಕೃತಿಯು ಒಂದು ಪ್ರಸ್ತುತ ನಮ್ಮ ದಿನಮಾನದ ರಾಜಕೀಯ ನಾಯಕರ ಡೊಂಬರಾಟದ ವ್ಯಂಗ್ಯ ಚಿತ್ರಣ. ಅಧಿಕಾರ ಲಾಲಸೆಗಾಗಿ ವ್ಯಕ್ತಿಯೊಬ್ಬ ಎಂತಹ ಅಧಃಪತನಕ್ಕೂ ಇಳಿಯಬಲ್ಲ ಎಂಬುದಕ್ಕೆ ಈ ನಾಟಕದ ಪಾತ್ರಧಾರಿಗಳು ಜೀವಂತ ನಿದರ್ಶನಗಳಾಗುತ್ತಾರೆ. ನಮ್ಮ ಸುತ್ತ ಮುತ್ತ ನಡೆಯುವ ಇಂತಹ ರಾಜಕೀಯ ವಿದ್ಯಮಾನದ ಅಯೋಮಯ ಸ್ಥಿತಿಯನ್ನು ಅರಿತುಕೊಳ್ಳಲು ಈ ನಾಟಕ ಸಹಾಯ ಮಾಡುತ್ತದೆ. ಅಲ್ಲದೆ, ಇಂದಿನ ಯುವ ಜನಾಂಗ ಇಂತಹ ವಾಸ್ತವ ಸತ್ಯಗಳನ್ನು ಈ ಪುಸ್ತಕದ ಮೂಲಕ ತಿಳಿದುಕೊಳ್ಳಬಹುದು ಎಂದಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪುರ ಗ್ರಾಮದ ಬಡ ಕೃಷಿಕ ಕುಟುಂಬದಲ್ಲಿ (ಜನನ : 28-4-1980) ಜನಿಸಿದ ಪ್ರಕಾಶ ಗಿರಿಮಲ್ಲನವರ ಶರಣ ಸಾಹಿತ್ಯ, ಸಂಸ್ಕೃತಿ ಪರಿಸರದಲ್ಲಿ ಬೆಳೆದು ಬಂದ ಒಬ್ಬ ಭರವಸೆಯ ಯುವ ಬರಹಗಾರ. ನಾಗನೂರು ರುದ್ರಾಕ್ಷಿಮಠದ ಪೂಜ್ಯ ಡಾ. ಶಿವಬಸವ ಮಹಾಸ್ವಾಮಿಗಳವರು ಸ್ಥಾಪಿಸಿದ ಉಚಿತ ಪ್ರಸಾದ ನಿಲಯದಲ್ಲಿ ಆಶ್ರಯ ಪಡೆದು ಬೆಳೆದವರು. ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ’ಲಿಂಗಾಯತ ಸಂಶೋಧನ ಕೇಂದ್ರ ಗ್ರಂಥಾಲಯ’ (ವಚನ ಅಧ್ಯಯನ ಕೇಂದ್ರ)ದಲ್ಲಿ 20 ವರ್ಷಗಳ ಕಾಲ ಗ್ರಂಥಾಲಯ ಸಹಾಯಕರಾಗಿ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದಾರೆ. ಇದುವರೆಗೂ 25ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ...
READ MORE