ಬಹುಮುಖಿ - ನಾಟಕ

Author : ವಿವೇಕ ಶಾನಭಾಗ

Pages 72

₹ 80.00




Year of Publication: 2020
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು(ಸಾಗರ) ಕರ್ನಾಟಕ - 577417

Synopsys

‘ಬಹುಮುಖಿ’ ವಿವೇಕ ಶಾನಭಾಗ ಅವರ ನಾಟಕಕೃತಿ. ಅಕ್ಷರ ಪ್ರಕಾಶನದಿಂದ 2008ರಲ್ಲಿ ಪ್ರಕಟಗೊಂಡ ಈ ಕೃತಿ 2020ರಲ್ಲಿ ಮತ್ತೆ ಮರುಮುದ್ರಣಗೊಂಡಿದೆ. ಇದು ಈವತ್ತಿನ ಕಾಲದಲ್ಲಿ ಜರುಗುವ ನಾಟಕ. ರೋಚಕ ಕಥೆಯೊಂದರ ಬೆನ್ನಟ್ಟಿ ಹೋದ ಪತ್ರಕರ್ತನೊಬ್ಬನಿಗೆ ಎದುರಾಗುವ ಜಗತ್ತು ಇಲ್ಲಿ ಹಲವು ಪಾತಳಿಗಳಲ್ಲಿ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಅವನು ಸೃಷ್ಟಿಸಿದ ಸುದ್ದಿಯ ಮುಖಾಂತರ ಅವರ ಜೀವನದೊಳಕ್ಕೆ ತರುತ್ತಾರೆ ಮತ್ತು ಆ ಮೂಲಕ ಪಲ್ಲಟದ ನೋವು, ಶಹರದ ಬದುಕಿನ ಢಾಂಬಿಕತೆ, ಪೊಳ್ಳು ಸಂಬಂಧಗಳ ಅಸಹನೀಯತೆ, ನಗರವೆಂಬ ಬೆಂಕಿಯೊಳಗೆ ಧಾವಿಸಿ ಬಿದ್ದು ಉರಿದು ಹೋಗುತ್ತಿರುವ ಜೀವನಕ್ರಮಗಳು ಅನಾವರಣಗೊಳ್ಳುತ್ತವೆ.

ನಮ್ಮ ದಿನನಿತ್ಯಗಳನ್ನು ಅನೇಕ ವಿಧಗಳಲ್ಲಿ ಪ್ರಭಾವಿಸುತ್ತಿರುವ ಮಾಧ್ಯಮಗಳು, ಅವು ಹುಟ್ಟಿಸಿದ ಭ್ರಮಾಲೋಕದಲ್ಲಿ ತಾಳತಪ್ಪಿದ ಸಂಬಂಧಗಳು, ಇತಿಹಾಸ-ಕಥನ-ನೆನಪುಗಳನ್ನು ಕುಶಲ ಕುತಂತ್ರದಿಂದ ಬಳಸುವ ಜನರು ನಾಟಕದುದ್ದಕ್ಕೂ ಹಲವು ವೇಶಗಳಲ್ಲಿ ಬರುತ್ತಾರೆ. ಯಾವುದು ಕಥನ, ಯಾವುದು ಇತಿಹಾಸ, ಯಾವುದು ವೈಯಕ್ತಿಕ ದುರಂತ, ಯಾವುದು ಜೀವನೋಪಾಯದ ಕಾಯಕ ಅನ್ನುವುದು ಸ್ಪಷ್ಟವಾಗದ, ಯಾರು ಯಾರನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆಂದು ತಿಳಿಯದ ವಿಶ್ವದೊಳಗೆ ಈ ನಾಟಕವಿದೆ.

About the Author

ವಿವೇಕ ಶಾನಭಾಗ

ವಿವೇಕ  ಶಾನಭಾಗ ಅವರು ಉತ್ತರ ಕನ್ನಡ ಜಿಲ್ಲೆಯವರು. ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರಾದ ವಿವೇಕ ಅವರು 'ದೇಶಕಾಲ' ಎಂಬ ಸಾಹಿತ್ಯಕ ಪತ್ರಿಕೆಯನ್ನೂ ಏಳು ವರ್ಷ ಕಾಲ ನಡೆಸಿದರು. ಹೊಸ ಬಗೆಯ ಕಥೆ ಕಟ್ಟುವ ಅವರು ಸಣ್ಣ ಊರು ಅಥವಾ ವಿಶಾಲ ಜಗತ್ತುಗಳೆರಡರಲ್ಲಿಯೂ ಮನುಷ್ಯರ ಮನಸ್ಸಿನ ಆಯಾಮ ಗುರುತಿಸಬಲ್ಲರು. ಅವರ ’ಘಾಚರ್ ಘೋಚರ್ ನೀಳ್ಗತೆಯ ಇಂಗ್ಲಿಷ್ ಅನುವಾದ ಜಗತ್ತಿನ ಸಾಹಿತ್ಯ ವಲಯದ ಗಮನ ಸೆಳೆದಿದೆ. ಲಂಡನ್, ಅಮೆರಿಕಗಳಲ್ಲಿ ಪ್ರತ್ಯೇಕ ಆವೃತ್ತಿ ಕಂಡಿರುವ ಈ ಕೃತಿ ಜಗತ್ತಿನ 18 ಭಾಷೆಗಳಿಗೆ ಅನುವಾದಗೊಂಡು ಮಚ್ಚುಗೆ ಗಳಿಸಿದೆ. ಅಂಕುರ, ಲಂಗರು, ಹುಲಿಸವಾರಿ, ಮತ್ತೊಬ್ಬನ ...

READ MORE

Related Books