ಸಿ.ಪಿ.ನಾಗರಾಜ ಅವರ ಪಂಪ ಭಾರತ ಓದು ನಾಟಕ ರೂಪದಲ್ಲಿ ಪ್ರಕಟವಾಗಿರುವ ಕೃತಿ. ‘ಪಂಪ ಭಾರತ ಓದು’ ಎಂಬ ಶೀರ್ಷಿಕೆಯಡಿಯಲ್ಲಿ ಮತ್ಸ್ಯಗಂಧಿ ಪ್ರಸಂಗ, ಅಂಬೆ ಪ್ರಸಂಗ, ಧೃತರಾಷ್ಟ್ರ ಪಾಂಡು ವಿದುರ ಜನನ, ಕರ್ಣನ ಜನನ, ಕರ್ಣನ ಬೆಳವಣಿಗೆ, ಶಾಪಕ್ಕೆ ಗುರಿಯಾದ ಪಾಂಡುರಾಜ, ಕುಂತಿಯ ಬಯಕೆ, ಗಾಂಧಾರಿಯ ಆತಂಕ ಎಂಬ ಎಂಟು ಪ್ರಸಂಗಗಳನ್ನು ನಾಟಕ ರೂಪದಲ್ಲಿ ಜೋಡಿಸಿದ್ದಾರೆ.
ಪ್ರತಿಯೊಂದು ಪ್ರಸಂಗದಲ್ಲಿಯೂ ಪಂಪ ಭಾರತ ಪಠ್ಯದ ನಾಟಕ ರೂಪ, ಪದ ವಿಂಗಡಣೆ ಮತ್ತು ತಿರುಳು, ಪಂಪ ಭಾರತ ಪಠ್ಯ ಎಂಬ ಮೂರು ಭಾಗಗಳಿವೆ. ವಿಮರ್ಶಕ ಎಚ್.ದಂಡಪ್ಪ ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ. ಹಳೆಗನ್ನಡ ಕಾವ್ಯಗಳನ್ನು ಜನರಿಗೆ ತಲುಪಿಸಲೆಂದು ಮಹಾಕವಿ ರನ್ನನ ಗದಾಯುದ್ಧ ಕಾವ್ಯವನ್ನು ನಾಟಕ ರೂಪದಲ್ಲಿ ಅಳವಡಿಸಿದ ಬಿ.ಎಂಶ್ರೀ ಅವರಿಂದ ಮೊದಲುಗೊಂಡು ನಮ್ಮ ಕನ್ನಡ ಲೇಖಕರು ಅನೇಕ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸುತ್ತಲೇ ಇದ್ದಾರೆ. ಈ ಹಾದಿಯಲ್ಲಿ ಸಿ.ಪಿ ನಾಗರಾಜ ಅವರು ‘ಪಂಪ ಭಾರತ ಓದು’ ಕೃತಿಯ ಮೂಲಕ ಒಂದು ಹೆಜ್ಜೆಯನ್ನು ಇಟ್ಟಿದ್ದಾರೆ ಎಂಬುದಾಗಿ ಪ್ರಶಂಸೆಯ ನುಡಿಗಳನ್ನಾಡಿದ್ದಾರೆ.
ಪಂಪ ಭಾರತ ಓದು (ಪ್ರಥಮಾಶ್ವಾಸ ) ಕೃತಿಯ ಕುರಿತು ಲೇಖಕ ಸಿ.ಪಿ. ನಾಗರಾಜ ಅವರ ಮಾತು.
©2024 Book Brahma Private Limited.