ಡಾ. ಚಂದ್ರಶೇಖರ ಕಂಬಾರರ 'ಸಾಂಬಶಿವ ಪ್ರಹಸನ ನಾಟಕವು ರಾಜಕೀಯದ ಸ್ವಾರ್ಥ, ಕುತಂತ್ರಗಳನ್ನು ವಿಡಂಬಿಸಲಾಗಿದೆ. ಅಧಿಕಾರದಲ್ಲಿರುವ ಜನರ ತಮ್ಮ ಅಜ್ಞಾನ ಮತ್ತು ಆಮಿಷಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆಯ ದಿವಾಳಿ ಹೇಗೆ ಕಾರಣರಾಗುತ್ತಾರೆ ಎಂಬುದು ನಾಟಕದ ಕೇಂದ್ರವಸ್ತು.
ತಂದೆ-ಮಕ್ಕಳಾದ ಸಾಂಬ ಮತ್ತು ಶಿವಅವರಲ್ಲಿ ಮದುವೆಯ ವಿಷಯವಾಗಿ ಮನಸ್ತಾಪ. ಊರ ಹೊರಗಿನ ಗಣೇಶ ದೇವಸ್ಥಾನಕ್ಕೆ ಬಂದು ಸಾಕ್ಷಾತ್ ಗಣೇಶನ ದರ್ಶನ ಮತ್ತು ವಿಶೇಷವಾದ ವರಗಳನ್ನು ಪಡೆಯುತ್ತಾರೆ. ತನ್ನ ಮಗ ಪ್ರೀತಿಸಿದ ಗಜನಿಂಬೆಯ ಮನೆಯೊಳಗೆ ಗಣೇಶ ನೀಡಿದ ಮುತ್ತು ನುಂಗಿ ಹೆಣ್ಣಾಳಾಗಿ (ಬಂಗಾರಿ ಹೆಸರಿನಿಂದ) ಸೇರಿಕೊಳ್ಳುತ್ತಾನೆ. ಅದೇ ಊರಿನ ರಾಜ, ಎಲ್ಲಿಯೋ ನೋಡಿದ ಹಸಿರು ಸೀರೆ ನೀಲಿ ರವಿಕೆಯ ಚೆಲುವಯೊಬ್ಬಳನ್ನು ನೆನಸುತ್ತ ಅರೆಹುಚ್ಚನಾಗಿದ್ದಾನೆ. ರಾಜನ ಕಾರಭಾರಿ ಹಸಿರು ಸೀರೆ, ನೀಲಿ ರವಿಕೆಯ ಹೆಣ್ಣು ಬಂಗಾರಿಯೇ ಎಂದು ತಿಳಿದು ಅರಮನೆಗೆ ಕರೆದೊಯ್ಯುತ್ತಾನೆ. ಅರಮನೆಯಲ್ಲಿ ಸ್ವಾರ್ಥಿ ಮತ್ತು ಚಿಲ್ಲರೆ ಎಂಬ ಅಧಿಕಾರಿಗಳು ರಾಜನನ್ನು ಭ್ರಮಾಲೋಕದಲ್ಲಿಟ್ಟಿದ್ದಾರೆ. ಪ್ರಜೆಗಳ ಮತ್ತು ರಾಜನ ಭೇಟಿಗೆ ಅವಕಾಶ ನೀಡಿಲ್ಲ. ರಾಜನ ಭೆಟ್ಟಿಗೆ ಬರುವ ಪ್ರಜೆಗಳಿಗೆ ಕಿಡಿಕಿಯಲ್ಲಿ ರಾಜನ ಕಾಲುಗಳನ್ನು ತೂರಿ ದರ್ಶನ ಕೊಡಿಸಲೆತ್ನಿಸುತ್ತಾರೆ. ಪ್ರಜೆಗಳು ರಾಜನ ಕಾಲುಗಳನ್ನು ಹೊರಗೆ ಎಳೆಯುತ್ತಾರೆ ಅಧಿಕಾರಿಗಳು ಒಳಗೆ ಎಳೆಯುತ್ತಾರೆ, ಇಕ್ಕಟ್ಟಿನಲ್ಲಿ ಸಿಲುಕಿರುವ ರಾಜನನ್ನು ಶಿವ ತನ್ನ ಕತ್ತೆಯನ್ನು ಬಿಟ್ಟು ಜನರನ್ನೆಲ್ಲ ಓಡಿಸುತ್ತಾನೆ. ರಾಜವನ್ನು ಇಕ್ಕಟ್ಟಿನಿಂದ ಪಾರು ಮಾಡಿದ ಕತ್ತೆ ರಾಜನ ಮಂತ್ರಿಯಾಗುತ್ತದೆ. ಶಿವ ಅದರ ಪಿ.ಎ. ಆಗುತ್ತಾನೆ. ಕತ್ತೆಗೆ ಡಿಂಗ್ಡಾಂಗ್‌ನೆಂದು ಮರುನಾಮಕರಣವಾಗಿ ಅದರ ಮದುವೆಯನ್ನು ಹೆಣ್ಣಿನೊಂದಿಗೆ ರಾಜ ಮಾಡಬಯಸುತ್ತಾನೆ. ಕತ್ತೆಯ ವಧುವನ್ನು ತಾನೇ ಅನುಭವಿಸಲು ಹವಣಿಸುತ್ತಾನೆ. ರಾಜನ ಕಾರಭಾರಿ ಸಾಂಬನು ಕೊಟ್ಟಿರುವ ಮುತ್ತನ್ನು ನುಂಗಿ ಖಾಯಂ ಹಣ್ಣಾಗಿ ಅವನಿಗೆ ದಕ್ಕುತ್ತಾನೆ. ರಾಜನು ಕತ್ತೆಯ ವೇಷ ಹಾಕಿದ್ದು ಜನರಿಗೆ ತಿಳಿದು ರಾಜಭ್ರಷ್ಟನಾಗಿ ಅಧಿಕಾರ ಕಳೆದುಕೊಳ್ಳುತ್ತಾನೆ. ಶಿವ ತಾನು ಪ್ರೀತಿಸಿದ ಗಜನಿಂಬೆಯನ್ನು ಮದುವೆಯಾಗುವುದರೊಂದಿಗೆ ನಾಟಕ ಮುಗಿಯುತ್ತದೆ.
©2024 Book Brahma Private Limited.