‘ಯಾವ ಹಿರಿ ಕರ್ತನದೊ ಈ ಜಗದ ನಾಟಕವು…’ ಎನ್.ಸಿ. ಮಹೇಶ್ ಅವರ ನಾಟಕಸಂಕಲನವಾಗಿದೆ. ಕೃತಿಯ ಕುರಿತು ನಾಟಕಕಾರ ಹೀಗೆ ಹೇಳುತ್ತಾರೆ; ಬರೆಯುವಾತ-ಅದರಲ್ಲೂ ನಾಟಕ ಬರೆಯುವಾತ ರಂಗದ ಮೇಲೆ ತನ್ನ ಕೃತಿ ಜೀವ ತಳೆಯಲಿ ಎಂದೇ ಬರೆಯುತ್ತಾನೆ. ಹಾಗೆ ಬರೆಯುವಾಗ ರಂಗದ ಮೇಲೆ ತನ್ನ ನಾಟಕ ಸೋಲುತ್ತದೋ ಗೆಲ್ಲುತ್ತದೋ ಎಂಬ ಆಳುಕನ್ನು ಇಂದಿನ ಕಾಲ ಮೂಡಿಸುತ್ತಿದೆ ಎಂದು ನನಗೆ ಅನೇಕ ಸಲ ಅನಿಸಿದೆ ಎನ್ನುತ್ತಾರೆ. ತಮ್ಮ ನಾಟಕ ಗೆದ್ದೇ ಗೆಲುತ್ತದೆ ಎಂದುಕೊಂಡಿರುವವರಿಗೆ ಒಂದು ಕ್ಲಾಸೋ ಮಾಸೋ ಜನವರ್ಗವಿರುವಂತೆ, ಈ ನಾಟಕ ಸೋಲಲಾರದು ಅಂದುಕೊಂಡಿರುವವರಿಗೂ ಇರುತ್ತದೆ. ಆದರೆ ಈ ವಿಶ್ವಾಸವನ್ನ ಬುಡಮೇಲು ಮಾಡುವ ಶಕ್ತಿ ಪ್ರೇಕ್ಷಕರಿಗೆ ಇದೆ. ಮತ್ತು ಬದಲಾಗುತ್ತಿರುವ ಕಾಲಧರ್ಮಕ್ಕೂ ಇದೆ ಅಂದುಕೊಂಡಿದ್ದೇನೆ. ಈ ಎಲ್ಲಾ ನಾಟಕಗಳನ್ನು ಬರೆದ ತರುವಾಯ ಅವು ನನಗೆ ಇಂದಿನ ವಸ್ತು ಸ್ಥಿತಿ ಅರಿಯಲಿಕ್ಕೆ ಬೆಳಕು ಕಾಣಿಸಿ ತಾವು ಕತ್ತಲಿನಲ್ಲಿ ಉಳಿದ ಉದಾರಿ ನಾಟಕಗಳಿವು ಎಂದಿದ್ದಾರೆ
©2024 Book Brahma Private Limited.