‘ತಾಯಿ’ ಕೃತಿಯು ಕೆ.ವಿ ಸುಬ್ಬಣ್ಣ ಅವರ ಸಂಪಾದಿತ ನಾಟಕಸಂಕಲನವಾಗಿದೆ. ಬ್ರೆಕ್ಟ್‌ನ ಎಪಿಕ್ ಥೇಟರ್‌ನ ಕಲ್ಪನೆ ಅತ್ಯುನ್ನತ ಮಟ್ಟದ ನಾಟಕ 19329 ರಲ್ಲಿ ಆತ ಬರೆದ ತಾಯಿ. ಮಾಕ್ಸಿಮ್ ಗಾರ್ಕಿಯ ಹೆಸರಿನ ವಿಸ್ತಾರವಾದ ಕಾದಂಬರಿ ಈ ನಾಟಕಕ್ಕೆ ಆಧಾರವಾಗಿದೆ. ‘ತಾಯಿ’ ಕಥಾವಸ್ತು 1905ರ ಕ್ರಾಂತಿಯತ್ನದಿಂದ ಆರಂಭಿಸಿ 1917ರ ನಿಜಕ್ರಾಂತಿಯವರೆಗೆ ಈ ಕೃತಿಯು ಕತನವನ್ನು ಒಳಗೊಂಡಿದೆ. ಈ ಕೃತಿಯು ವಿಶ್ಲೇಷಿಸುವಂತೆ ಗಾರ್ಕಿಯ ತಾಯಿ ಇಡೀ ರಷ್ಯಾವನ್ನು ಪ್ರತಿನಿಧಿಸುತ್ತಾಳೆ. ಕಮ್ಯುನಿಸಮ್ ನ ಪರಿಚಯವಾದಾಗ ಅವಳಿಗಾಗುವ ಭಯ, ಆತಂಕ, ಅಭದ್ರತೆ, ಅನುಮಾನಗಳು ಇಡೀ ರಷ್ಯಾಕ್ಕೆ ಆದದ್ದು. ಗಾರ್ಕಿಯ ಈ ಪಾತ್ರ ಬ್ರೆಕ್ಟ್‌ನಲ್ಲಿ ಕಾಲದೇಶಗಳ ಎಲ್ಲ ಮಿತಿಗಳನ್ನೂ ಮೀರಿ ನಿಲ್ಲುತ್ತದೆ. ಇಲ್ಲಿ ನಾಟಕದ ತಾಯಿ, ಎಲ್ಲ ಜನತೆಯ ಶೋಷಿತ ಜನಾಂಗಗಳ ಹೋಸ ಸಾಧ್ಯತೆಗಳನ್ನು ಎತ್ತಿ ತೋರಿಸುತ್ತದೆ.
©2024 Book Brahma Private Limited.