ಕಾಳಿದಾಸನ ಕೃತಿಗಳ ವಿಮರ್ಶೆ ಎಂದರೆ ಎಂದಿಗೂ ಮುಗಿಯದ ಮನೋರಥಗಳ ಸಾಲು..ಕಾಳಿದಾಸನ ದಿವ್ಯ ಕಲ್ಪನೆಯು ನಿರಾಯಾಸವಾಗಿ ಸಾಗುತ್ತದೆ. ಅನುವಾದಕ ಡಾ. ಕೆ. ಕೃಷ್ಣಮೂರ್ತಿ ಹೇಳುವಂತೆ ’ಕಾಳಿದಾಸನ ಸೃಷ್ಟಿಯಲ್ಲಿ ಪ್ರತಿಭೆ, ರಸ, ವರ್ಣನೆ, ದಿವ್ಯತ್ವ ಜೊತೆಗೆ ಮಾನವೀಯ ಸೃಷ್ಟಿ, ಉದಾತ್ತತೆ, ದುಃಖ ಹೀಗೆ ಇದ್ದು, ಕಾಳಿದಾಸನನ್ನು ವಿಶ್ವದಾರ್ಶನಿಕರ ಸಾಲಿನಲ್ಲಿ ನಿಲ್ಲಿಸುತ್ತವೆ. ಕಾಳಿದಾಸನ ಕಾವ್ಯವು ಮನಸ್ಸನ್ನು ಸೂರೆಗೊಳ್ಳುತ್ತದೆ. ಮುಗ್ದಗೊಳೀಸುತ್ತದೆ. ಪ್ರಕೃತಿ ದೇವಿಯು ತನ್ನ ವಿಲಾಸಲೀಲೆಗಳನ್ನು , ವೇಷ-ವಿನ್ಯಾಸಗಳನ್ನು , ಭಾವಭಂಗಿಗಳನ್ನು ಅಭಿನಯಿಸುತ್ತಾ, ಪ್ರತಿ ಕ್ಷಣವೂ ನಾಟ್ಯ ಮಾಡುತ್ತಾಳೆ, ಆತನ ಕಾವ್ಯರಂಗದಲ್ಲಿ ಎಂದು ಪ್ರಶಂಸಿಸಿದ್ದಾರೆ. ಕವಿ ಆನಂದವರ್ಮ ನುಡಿಯುವಂತೆ ಕಾಳಿದಾಸನು ನಾಟಕ ಸಾಮ್ರಾಜ್ಯದ ಅನಭಿಷಕ್ತ ಸಾರ್ವಭೌಮ; ಕವಿ ಎಂಬುದು. ಹೀಗೆ ಕಾಳಿದಾಸನು ರಚಿಸಿರುವ ನಾಟಕಗಳ ಅನುವಾದವೇ ಈ ಕೃತಿ-ಕಾಳಿದಾಸನ ನಾಟಕಗಳು.
©2024 Book Brahma Private Limited.