‘ಮಂಥರಾ’ ಕೃತಿಯು ಎಚ್.ಎಸ್. ವೆಂಕಟೇಶಮೂರ್ತಿ ಅವರ ನಾಟಕ ಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಜಿ.ಎನ್. ರಂಗನಾಥರಾವ್ ಅವರು, ‘ಏಕಕಾಲದಲ್ಲಿ ಕಾವ್ಯ, ದೃಶ್ಯ, ಕಥಾನಕ-ಈ ಮೂರು ನೆಲೆಗಳಲ್ಲಿ ಸೃಜನಶೀಲವಾಗಿರುವ ಪ್ರತಿಭಾ ಕೌಶಲವನ್ನು ಈ ನಾಟಕಗಳಲ್ಲಿ ಕಾಣಬಹುದು. ಇಲ್ಲಿ ಸಾಂಪ್ರದಾಯಿಕ ಅರ್ಥದ ಕಥಾವಸ್ತು ಎಂಬುದಿಲ್ಲ. ಈ ಮಾತು ವಿಶೇಷವಾಗಿ ಅವರ ಕಾವ್ಯ ನಾಟಕಗಳಿಗೆ ಅನ್ವಯಿಸುತ್ತದೆ. ಮಂಥರೆಯಂತಹ ಪುರಾಣ ಪ್ರಸಿದ್ದ ವ್ಯಕ್ತಿಯ ಅಂತರಂಗವನ್ನು ಶೋಧಿಸುವ ನಾಟಕದಲ್ಲಿ ನಾಟಕೀಯ ಉತ್ಕಟವನ್ನು ಕಾವ್ಯಕ್ಕೆ ಒಗ್ಗಿಸಿಕೊಳ್ಳುವ ತಂತ್ರಕೌಶಲವು ಹೆಚ್.ಎಸ್. ವಿ ಅವರಿಗೆ ಸಿದ್ದಿಸಿರುವುದನ್ನು ತೋರಿಸಿಕೊಡುತ್ತದೆ ಈ ಕೃತಿ ’ ಎಂದು ಪ್ರಶಂಸಿಸಿದ್ದಾರೆ.
ವೆಂಕಟೇಶ ಮೂರ್ತಿ ಅವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಮಧ್ಯಮವರ್ಗದ ಕುಟುಂಬವೊಂದರಲ್ಲಿ 23-06-1944ರಲ್ಲಿ ಜನಿಸಿದರು. ಮೂವತ್ತು ವರ್ಷಗಳ ಕಾಲ ಗ್ರಾಮ್ಯಜೀವನ ನಡೆಸಿ ನಂತರ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 1973ರಲ್ಲಿ ನೇಮಕಗೊಂಡರು. 2000 ರಲ್ಲಿ ನಿವೃತ್ತರಾದ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಾರಂಭದಲ್ಲಿ ಯಕ್ಷಗಾನ, ಬಯಲಾಟದಂಥ ರಂಗಪ್ರದರ್ಶನಗಳು ಇವರ ಮೇಲೆ ಗಾಢ ಪ್ರಭಾವ ಬೀರಿದವು. ಬಾಲ್ಯದಲ್ಲೇ ಕುಮಾರವ್ಯಾಸ, ಪುರಂದರ, ಲಕ್ಷ್ಮೀಶ ಮೊದಲಾದವರ ಕೃತಿಗಳ ನಿಕಟ ಸಂಪರ್ಕ ದೊರೆಯಿತು. ಮುಂದೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯ ಪರಂಪರೆಯೊಂದಿಗೆ ನಡೆಸಲಾದ ...
READ MORE