ಟಿ.ಪಿ. ಕೈಲಾಸಂ ಅವರ ಕೃತಿ-ಬಹಿಷ್ಕಾರ ಅಥವಾ ಹಾರ್ವ ಕೆಟ್ಟದ್ದು ಹೊನ್ನಿಂದ ಅಥವಾ ತಪ್ಪ್ಯಾರದೂ?’ . 1929ರಲ್ಲಿ ಧಾರವಾಡದ ಆಲೂರು ವೆಂಕಟರಾಯರು ಮೊದಲು ಈ ಕೃತಿಯನ್ನು ಪ್ರಕಟಿಸಿದರು. ಮಾಧವ ಸನ್ಸ್ (1943) ಹಾಗೂ ಆನಂದ ಬ್ರದರ್ಸ್ (1952) ಮತ್ತು 1967 ಹಾಗೂ 1972ರಲ್ಲಿ ಹೀಗೆ ನಾಲ್ಕು ಆವೃತ್ತಿಗಳನ್ನು ಕಂಡಿದೆ. ಗೌರವಾನ್ವಿತ ಪರಂಪರೆಯಿಂದ ಬ್ರಾಹ್ಮಣ ಸಮುದಾಯವು ಹೇಗೆ ಕಾಲಾನುಕ್ರಮೇಣ ತನ್ನ ಗೌರವವನ್ನು ಕಡಿಮೆ ಮಾಡಿಕೊಂಡಿತು ಎಂಬ ಬಗ್ಗೆ ಹಾಸ್ಯ ಹಾಗೂ ಚಿಂತನಾ ಪ್ರಧಾನವಾಗಿ ನಾಟಕ ಸಾಗುತ್ತದೆ.
ಕನ್ನಡ ನಾಟಕರಂಗದಲ್ಲಿ ಹೊಸಶಕೆಯನ್ನು ಆರಂಭಿಸಿದ ಟಿ ಪಿ. ಕೈಲಾಸಂ ಅವರು ಬೆಂಗಳೂರಿನಲ್ಲಿ 26-07-1885ರಲ್ಲಿ ತ್ಯಾಗರಾಜ ಪರಮಶಿವ ಅಯ್ಯರ್ – ಕಲಮಮ್ಮ ದಂಪತಿಗಳ ಪುತ್ರರಾಗಿ ಜನಿಸಿದರು. ಬೆಂಗಳೂರು, ಹಾಸನ, ಮೈಸೂರುಗಳಲ್ಲಿ ಶಾಲಾ ಶಿಕ್ಷಣ ಮುಗಿಸಿ 1908ರಲ್ಲಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿ ಬಿ ಎ ಪದವಿಗಳಿಸಿದರು. ಪ್ರೌಢವ್ಯಾಸಂಗಕ್ಕೆ ಲಂಡನ್ನಿಗೆ ತೆರಳಿ 6 ವರ್ಷಗಳ ಕಾಲ ಭೂಗರ್ಭಶಾಸ್ತ್ರ ಅಭ್ಯಸಿಸಿ 1915ಕ್ಕೆ ಬೆಂಗಳೂರಿಗೆ ಹಿಂತಿರುಗಿದರು. ಭೂಗರ್ಭಶಾಸ್ತ್ರ ಇಲಾಖೆಯಲ್ಲಿ ಭೂಶೋಧಕರಾಗಿ ಸೇರಿ 5 ವರ್ಷ ಉದ್ಯೋಗ ಮಾಡಿದರು. ಅನಂತರ ರಾಜೀನಾಮೆ ನೀಡಿ ರಂಗಭೂಮಿಯ ಚಟುವಟಿಕೆಗಳಲ್ಲಿ ನಿರತರಾದರು. ವ್ಯಾಯಾಮಕ್ಕೆ ಹೆಚ್ಚು ಒತ್ತು ಕೊಟ್ಟಿದ್ದ ಕೈಲಾಸಂ ಕನ್ನಡ ...
READ MORE