ಪರ್ವತವಾಣಿ ಅವರು ಬರೆದ ನಾಟಕ-ಮೀನಾ ಮದುವೆ. ಹಣ ತರುವ ವರನಿಗಷ್ಟೇ ಬೆಲೆ. ಅದು ಸರ್ಕಾರಿ ನೌಕರಿ, ಪಿಂಚಿಣಿ ಹೀಗೆ ಏನೆಲ್ಲ ಸೌಲಭ್ಯವಿರುವ ಗಂಡಾದರೆ ಹೆಣ್ಣು ಒಪ್ಪುವಳು. ದಿನಾಲು ಜೀವನೋಪಾಯಕ್ಕೆಂದು ಹಣ ತರುವ ಎಂತಹ ಗಂಡಸೇ ಆಗಲಿ ಅದು ಬೇಡ. ಇಂತಹ ಮನಸ್ಥಿತಿಯ ಹೆಣ್ಣುಗಳು ಸಮಾಜದ ಚಿತ್ರಣವನ್ನು ಬದಲಿಸಿವೆ ಎಂಬುದನ್ನು ಮಾರ್ಮಿಕವಾಗಿ ಚಿತ್ರಿಸಿರುವ ನಾಟಕವಿದು.
’ಪರ್ವತವಾಣಿ’ ಎಂದು ಜನಪ್ರಿಯರಾಗಿದ್ದ ಕನ್ನಡದ ನಾಟಕಕಾರ, ನಟ, ನಿರ್ದೇಶಕ ಪರ್ವತ ವಾಡಿ ನರಸಿಂಗರಾವ್. 1911ರ ಸೆಪ್ಟಂಬರ್ 2 ತಮಿಳುನಾಡಿನ ಹತ್ತಿರದ ಹಳ್ಳಿ ಪರ್ವತವಾಡಿಯಲ್ಲಿ ಜನಿಸಿದರು. ಇವರ ಕಂಚಿನ ಕಂಠವನ್ನು ಕೇಳಿದ ವಿ. ಕೃ. ಗೋಕಾಕ್ ನೀಡಿದ ಸೂಚನೆಯ ಮೇರೆಗೆ ಪರ್ವತವಾಡಿಯವರು ’ಪರ್ವತವಾಣಿ’ ಆದರು. ಪರ್ವತವಾಣಿಯವರು ತಾರಾಮಂಡಲವೆಂಬ ಹವ್ಯಾಸಿ ನಾಟಕತಂಡವನ್ನು, ಆನಂತರ ನಂಕಪ್ನಿ ಎಂಬ ನಾಟಕತಂಡವನ್ನು ಕಟ್ಟಿ ಸಾವಿರಾರು ನಾಟಕಪ್ರಯೋಗಗಳನ್ನು ಮಾಡಿದರು. ಸ್ವತಃ ಅನೇಕ ನಾಟಕಗಳನ್ನು ರಚಿಸಿದ್ದಾರೆ. ಅಲ್ಲದೆ ’ಭಾಗ್ಯದ ಲಕ್ಷ್ಮೀ ಬಾರಮ್ಮ’ ಎನ್ನುವ ಚಲನಚಿತ್ರದಲ್ಲೂ ಅಭಿನಯಿಸಿದ್ದಾರೆ. ಅವರು ಸುಮಾರು 83 ನಾಟಕಗಳನ್ನು ರಚಿಸಿದ್ದು ಮೊದಲ ನಾಟಕ ’ಮಾಲತಿ’. ಹಣಹದ್ದು, ...
READ MORE