ಲೇಖಕ ಜೆ.ಪಿ. ರಾಜರತ್ನಂ ಅವರು ಬರೆದ ಏಕಾಂಕ ನಾಟಕ-ಗಂಡುಗೊಡಲಿ. ವಟುಗಳು, ಪರಶುರಾಮ, ರೇಣುಕೆ, ಜಮದಗ್ನಿ, ದೂತ ಹಾಗೂ ಕಶ್ಯಪ-ಈ ಪಾತ್ರಗಳನ್ನು ಒಳಗೊಂಡ ನಾಟಕ. ಅನ್ಯಾಯವನ್ನು ಮೆಟ್ಟಿನಿಲ್ಲುವ ಪರಶುರಾಮನ ವೀರಾವೇಶವು ನಾಟಕದ ಕೇಂದ್ರ ಬಿಂದು. ಸನ್ನಿವೇಶಗಳು, ಸಂಭಾಷಣೆ ಹಾಗೂ ಪಾತ್ರಗಳ ದೃಷ್ಟಿಯಿಂದ ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂದಿದೆ ಗಂಡುಗೊಡಲಿ-ಎಂಬುದು ಅನ್ಯಾಯದ ವಿರುದ್ಧ ಸದಾ ಸಿದ್ಧವಾಗಿರುವ ಸಾಧನ ಎಂಬ ಅರ್ಥದಲ್ಲಿ ಬಳಸಲಾಗಿದೆ.
ಆಡುಮಾತಿನ ಪದಗಳ ಬಳಕೆಯ ‘ರತ್ನನ ಪದಗಳು’ ಮೂಲಕ ಜನಪ್ರಿಯರಾಗಿದ್ದ ಜಿ.ಪಿ. ರಾಜರತ್ನಂ ಅವರು ಕನ್ನಡ ಸಾಹಿತ್ಯದ ಪರಿಚಾರಿಕೆಗೂ ಹೆಸರಾಗಿದ್ದರು. ರಾಜರತ್ನಂ ಅವರು ಜನಿಸಿದ್ದು ಬೆಂಗಳೂರು ಜಿಲ್ಲೆಯ ರಾಮನಗರದಲ್ಲಿ 1908ರ ಡಿಸೆಂಬರ್ 8 ರಂದು. ತಂದೆ ಜೆ.ಪಿ. ಗೋಪಾಲಕೃಷ್ಣಯ್ಯಂಗಾರ್. ರಾಜರತ್ನಂ ಅವರು ಮೈಸೂರಿನಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿ, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಮತ್ತು ಮೈಸೂರು ಮಹಾರಾಜ ಕಾಲೇಜಿನಲ್ಲಿ ಎಂ.ಎ. ಪದವಿ ಗಳಿಸಿದರು. ಅನಂತರ ಮೈಸೂರು, ತುಮಕೂರು, ಶಿವಮೊಗ್ಗ, ಬೆಂಗಳೂರು ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು 1964ರಲ್ಲಿ ನಿವೃತ್ತರಾದ ಮೇಲೆ ಯುಜಿಸಿ ಉಪಾಧ್ಯಾಯರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು. ಕವಿ, ...
READ MORE