ಬಾನುಲಿಯಿಂದ ಪ್ರಸಾರಗೊಂಡ ತಮ್ಮ ರೂಪಕಗಳನ್ನು ಲೇಖಕಿ ಶೈಲಜಾ ಸುರೇಶ್ ಸಂಗ್ರಹಿಸಿ ಪ್ರಕಟಿಸಿದ ಕೃತಿಯೇ -ಬಾನುಲಿ ರೂಪಕಗಳು. ದೃಶ್ಯ ನಾಟಕ ಬರವಣಿಗೆಗಿಂತ ತೀರಾ ಭಿನ್ನವಾಗಿ ಬಾನುಲಿಯ ನಾಟಕ ಹಾಗೂ ರೂಪಕಗಳಿರುತ್ತವೆ. ಬಾನುಲಿ ನಾಟಕಗಳು ಕೇವಲ ಶ್ರವಣದ ಮೂಲಕವೇ ಕೇಳುಗರ ಮನಸ್ಸನ್ನು ಆವರಿಸಿಕೊಳ್ಳುತ್ತವೆ. ಈ ಪ್ರಕಾರದ ಸಾಹಿತ್ಯಕ್ಕಿರುವ ಮಿತಿಯಲ್ಲೇ ರೂಪಕಗಳ ಸಾಹಿತ್ಯ ರಚನೆ ಅನಿವಾರ್ಯವಾಗುತ್ತದೆ. ಬಾನುಲಿ ರೂಪಕಗಳನ್ನು ಬರೆಯುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ ಎನ್ನುವುದಕ್ಕೆ ಇಲ್ಲಿಯ ಬರೆಹ ಶೈಲಿ-ಘಟನೆಗಳ ಸಂಬಂಧ ಜೋಡಣೆ, ಅದು ಕೇಳುಗರ ಮೇಲೆ ಉಂಟು ಮಾಡುವ ಪರಿಣಾಮಗಳೇ ಕನ್ನಡಿ ಹಿಡಿಯುತ್ತವೆ.
ಶೈಲಜಾ ಸುರೇಶ್ (ದಾಕ್ಷಾಯಿಣಿ ಎಚ್.), ಬಿ.ಎ. ಪದವೀಧರರು. 1964ರ ಅಕ್ಟೋಬರ್ 2 ರಂದು ಹಾಸನದಲ್ಲಿ ಜನನ. ತಂದೆ ಹೆಚ್. ಹನುಮಂತಪ್ಪ, ತಾಯಿ- ಸಾವಿತ್ರಮ್ಮ. ಕಾದಂಬರಿ : ಇಂದಿರಾ 2004, ಹೃದಯರಾಗ 2006, ಬಾಳಿನ ಹೊಂಬೆಳಕು 2008, ಕಥಾಸಂಕಲನ : ಹೊಂಗನಸು 2012ರಲ್ಲಿ ಪ್ರಕಟವಾಗಿವೆ. ಸಣ್ಣಕತೆ ಹಾಗೂ ನಾಟಕಗಳನ್ನು ರಚಿಸಿದ್ದು ಹವ್ಯಾಸಿ ಪತ್ರಕರ್ತೆ ಕೂಡ. ಆಕಾಶವಾಣಿ, ದೂರದರ್ಶನಕ್ಕಾಗಿ ಹಲವು ಬರೆಹಗಳನ್ನು ನೀಡಿದ್ದಾರೆ. ಅವರು ಲೇಖಕಿಯರ ಸಾಹಿತ್ಯ ವೇದಿಕೆಯ ಅಧ್ಯಕ್ಷರು. ಇವರಿಗೆ ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ದೇವರ ದಾಸಿಮಯ್ಯ ಪ್ರಶಸ್ತಿ, ಸಾಹಿತ್ಯ ಸೇತು ಪ್ರಶಸ್ತಿ, ಗೌರವಹುದ್ದೆ : ಹಾಸನ ಜಿಲ್ಲಾ ಕನ್ನಡ ಲೇಖಕಿಯರ ...
READ MORE