ಲೇಖಕ ಸೋಮು ರೆಡ್ಡಿ ಅವರ ನಾಟಕ ಕೃತಿ ʻತಲಾಷ್ʼ. ಪುಸ್ತಕದ ಕುರಿತು ಲೇಖಕರು, “ಈ ನಾಟಕದಲ್ಲಿ ಬರುವ ಎಲ್ಲಾ ಸನ್ನಿವೇಶಗಳು ಕೇವಲ ಕಾಲನಿಕವಾಗಿವೆ. ಇಲ್ಲಿನ ಎಲ್ಲಾ ಪಾತ್ರಗಳ ಹುಟ್ಟಿಗೆ ಕಾರಣ ನನ್ನ ಬಾಲ್ಯದ ಪರಿಸರ. ಅಂದಿನ ದಿನಗಳಲ್ಲಿ ಕೆಳವರ್ಗದ ಜನರನ್ನು ಹಿಂಸಿಸಿದ ಪರಿ, ಈಗಿನ ಕಾಲದವರೆಗೂ ಅಲ್ಲಲ್ಲಿ ಮುಂದುವರೆದಿದ್ದು ಈ ನಾಟಕದಲ್ಲಿ ಪ್ರಮುಖ ಅಂಶವಾಗಿ ಬಳಸಿದ್ದೇನೆ. ಸಮಾಜಕ್ಕೆ ಸ್ಪಂದಿಸುವ ತುಡಿತವೋ? ಅಥವಾ ಸಮಾನತೆ ಸಮಾಜ ಕಟ್ಟುವ ಹಪಹಪಿಯೋ? ಗೊತ್ತಿಲ್ಲ. ನಾನಿಲ್ಲಿ ಜಾತ್ಯಾತೀತತೆಯನ್ನು ಅಭಿವ್ಯಕ್ತಿಪಡಿಸಿದ್ದೇನೆ. ಜೊತೆ ಜೊತೆಗೆ ಮೌಢ್ಯವನ್ನು ವಿರೋಧಿಸಿದ್ದೇನೆ. ಮನುಷ್ಯನ ಅವಗುಣಗಳಾದ ದುರಾಸೆ, ಲಾಲಸೆ, ಲಂಚಗುಳಿತನ, ಕಾಮ, ದ್ರೋಹ ಎಂಬಿತ್ಯಾದಿಗಳುಮತ್ತು ಅವು ಪಡೆದುಕೊಳ್ಳುವ ಸ್ವರೂಪಗಳಿಂದಾಗುವ ದುರಂತಗಳ ಬಗೆಗೆ ಇಲ್ಲಿ ವಿವರಿಸಲು ಯತ್ನಿಸಿದ್ದೇನೆ. ಈ ಸಮಾಜದಲ್ಲಿ ಎಲ್ಲರೂ ಸಮಾನತೆಯಿಂದ ಬಾಳಿ ಬದುಕಬೇಕು. ನೆಮ್ಮದಿಯ ಜೀವನಕ್ಕೆ ಕುತ್ತು ತರುವ ಜಾತಿ, ಧರ್ಮಗಳ ಗೊಡುವೆ ಬಿಟ್ಟು ಮನುಷ್ಯತ್ವ ಉಳಿಯಬೇಕು ಎಂಬುದು ಒಟ್ಟು ಈ ನಾಟಕದ ಆಶಯವಾಗಿದೆ” ಎಂದು ಹೇಳಿದ್ದಾರೆ.
©2024 Book Brahma Private Limited.