ಚಂದ್ರಪ್ರಭ ಕಠಾರಿ ಅವರ ನಾಟಕ-ಅಂಬು. ಡಾ. ವಿಜಯಾ ಅವರು ಮುನ್ನುಡಿ ಬರೆದು ‘ಮಹತ್ವಾಕ್ಷಾಂಕ್ಷೆ ಹೊತ್ತು ನುಗ್ಗುವ ಯುವ ಜನಾಂಗವನ್ನು ತಪ್ಪು ದಾರಿಗೆಳೆಯುತ್ತಿರುವ ಶಿಕ್ಷಣ ವ್ಯವಸ್ಥೆಯಲ್ಲಿಯ ಲೋಪದೋಷಗಳು, ಅಜ್ಞಾನ ಮುಗ್ಧತೆಯನ್ನು ಸ್ವಂತಕ್ಕೆ ಬಳಸಿಕೊಳ್ಳುವ ರಾಜಕಾರಣವನ್ನು, ಭ್ರಷ್ಟಗೊಂಡ ನಮ್ಮ ಸಂದರ್ಭವನ್ನು ಎಳೆ ಎಳೆಯಾಗಿ ಬಿಡಿಸಿಡುತ್ತಾ ಹೊಸ ಅಕ್ಷರ ಕ್ರಾಂತಿಯ ಅಗತ್ಯ, ಅದಕ್ಕಾಗಿ ಸಂಘಟನೆ, ಅದು ಸಾಧ್ಯವಾಗುವವರೆಗೆ ಇದ್ದಲ್ಲೇ ಏಕಾಂಗಿಯಾದರೂ ಸರಿಯೇ, ಈ ವ್ಯವಸ್ಥೆಯ ವಕ್ತಾರರೆಂದು ಕೊಂಡ ಮೃಗಗಳಿಗೆ ಅಂಬು ಆಗಲು ಸನ್ನದ್ಧರಾಗಬೇಕು’ ಎಂದು ನಾಟಕದ ಆಶಯವನ್ನು ಪ್ರಶಂಸಿಸಿದ್ದಾರೆ.
ಲೇಖಕ ಚಂದ್ರಪ್ರಭ ಕಠಾರಿ ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್. ಕತೆ, ಕವನ, ನಾಟಕ ಬರೆಯುವುದು ಹವ್ಯಾಸ. ಕಠಾರಿ ಕತೆಗಳು ( ಇಲ್ಲಿಯ ಹಲವು ಕತೆಗಳು ಸಂಕ್ರಮಣ ಸಾಹಿತ್ಯ ಪತ್ರಿಕೆ, ಈ ಭಾನುವಾರ, ಕರ್ನಾಟಕ ಸಂಘ, ಮುಂಬೈ, ಕನ್ನಡ ಸಾಹಿತ್ಯ ಪರಿಷತ್ ಪ್ರಕಟಿಸಿದ ಕೋಲ್ಮಿಂಚು, ಕಥಾ ಸರ್ಧೆಗಳಲ್ಲಿ ಬಹುಮಾನ ಪಡೆದಿವೆ.) ಮತ್ತು ಅಂಬು ( ನಾಟಕ) ಪ್ರಕಟವಾಗಿವೆ. ...
READ MORE