ಹಿರಿಯ ಲೇಖಕ ಸಂಸ (ಎ.ಎನ್.ಸ್ವಾಮಿ ವೆಂಕಟಾದ್ರಿ ಅಯ್ಯರ್) ಅವರು ಬರೆದ ಐತಿಹಾಸಿಕ ನಾಟಕ ಕೃತಿ-ವಿಗಡ ವಿಕ್ರಮರಾಯ. 1926-26ರಲ್ಲಿ ರಚಿಸಿದ ಈ ನಾಟಕವನ್ನು ಮೊದಲ ಬಾರಿಗೆ ‘ಪ್ರಬುದ್ಧ ಕರ್ನಾಟಕ’ ಪತ್ರಿಕೆ ಪ್ರಕಟಿಸಿತ್ತು. ಇವರನ್ನು ಚಾರಿತ್ರಿಕ ನಾಟಕಗಳ ಪಿತಾಮಹಾ ಎಂದು ಕರೆಯಲಾಗುತ್ತದೆ. ಮೈಸೂರು ಮಹಾರಾಜರ ಕಾಲದ ದಳವಾಯಿಯೊಬ್ಬರ ಹಣದ ದಾಹ, ಅಧಿಕಾರ ಮೋಹ, ಭ್ರಷ್ಟಾಚಾರ ಇಲ್ಲಿಯ ಕಥಾ ವಸ್ತು. ಈ ಬಗ್ಗೆ ಮಹಾರಾಜರು ತನಿಖೆ ನಡೆಸಲು ಆದೇಶಿಸುತ್ತಿದ್ದಂತೆ, ದಾಖಲೆಗಳ ತಿದ್ದುಪಡಿಗೆ ವಿಕ್ರಮರಾಯ ಆತುರ ಪಡುತ್ತಾನೆ. ಮಹಾರಾಜರನ್ನೂ ಸಹ ಕೊಲ್ಲುವ ಸಂಚು ರೂಪಿಸುತ್ತಾನೆ. ಆಸ್ಥಾನ ವೈದ್ಯ ಬೊಮ್ಮರಸ ಪಂಡಿತನನ್ನು ಬಳಸಿಕೊಳ್ಳುತ್ತಾನೆ. ಮಹಾರಾಜರನ್ನು(ಇಮ್ಮಡಿರಾಜ) ಕೊಂದ ನಂತರ ರಣಧೀರ ಕಂಠೀರವನನ್ನು ಪಟ್ಟಕ್ಕೇರಲು ಆಹ್ವಾನಿಸುತ್ತಾನೆ. ವಿಗಡ ವಿಕ್ರಮರಾಯನ ಲೆಕ್ಕಾಚಾರ ತಪ್ಪುತ್ತದೆ. ರಣಧೀರ ಕಂಠೀರವ ಈತನ ಹೇಳಿದ ಹಾಗೆ ಕೇಳುವುದಿಲ್ಲ. ಆಗ ವಿಕ್ರಮರಾಯನ ಕೊಲೆಯಾಗುತ್ತದೆ. ಇದು ಇತಿಹಾಸ ಸಂಗತಿಯ ಕಥಾ ವಸ್ತುವಾಗಿದ್ದರೂ ಇಂದಿಗೂ ರಾಜಕಾರಣದ ಇಂತಹ ಸಂಚುಗಳು ಚಾಲ್ತಿಯಲ್ಲಿರುವುದನ್ನು ಕಾಣುತ್ತೇವೆ.
©2024 Book Brahma Private Limited.