ಕುಡ್ಲ ತುಳುಕೂಟ ನಡೆಸುವ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ತುಳುನಾಟಕ ಹಸ್ತಪ್ರತಿ ಸ್ಪರ್ಧೆಯಲ್ಲಿ ಸತತವಾಗಿ 44 ಮತ್ತು 45 ನೇ ವರ್ಷ ಪ್ರಥಮ ಸ್ಥಾನ ಪಡೆದ ಎರಡು ನಾಟಕಗಳಾಗಿದ್ದು ಬೇಲಿ ಸಾಮಾಜಿಕ ನಾಟಕ ಹಾಗೂ ಸಾಪೊದ ಕಣ್ಣ್ ಪೌರಾಣಿಕ ಹಿನ್ನೆಲೆಯನ್ನು ಹೊಂದಿರುವಂತಹದ್ದು. 'ಬೇಲಿ' ನಾಟಕ ಅಕ್ರಮ ಭೂ ಕಬಳಿಕೆಯ ವಿರುದ್ಧ ಧ್ವನಿಯೆತ್ತುವ ಬಡ ಕುಟುಂಬದ ಸಂಕಟ ಮತ್ತು ಪೇಟೆಯ ಗುಂಗಿನಲ್ಲಿರುವ ಯುವಕನ ಹೋಮ್ ಸ್ಟೇ ಹುಚ್ಚಿನ ಸುತ್ತ ರಚಯಿತವಾಗಿದೆ. 'ಸಾಪೊದ ಕಣ್ಣ್' ಮಹಾಭಾರತದ ಶಿಖಂಡಿಯನ್ನಾಧರಿಸಿ ಬರೆದಿದ್ದು ಶಿಖಂಡಿಗೆ ಕಳೆದ ಜನ್ಮದ ನೆನಪಾದರೆ ಆತ ಭೀಷ್ಮನೆದುರು ಹೇಗೆ ನಿಲ್ಲಬಲ್ಲನೆಂಬುದು ನಾಟಕದ ತಿರುಳಾಗಿದ್ದು ಪ್ರಸ್ತುತ ಮಂಗಳಮುಖಿಯರ ಸ್ಥಾನಮಾನವನ್ನು ಶಿಖಂಡಿಯ ಮಾತಿನೊಡನೆ ಸಮೀಕರಿಸುತ್ತಾ ಸಾಗುತ್ತದೆ. ತುಳುವಿನಲ್ಲಿ ಮಂಗಳಮುಖಿಯರ ಬದುಕನ್ನಾಧರಿಸಿ ಬರೆದ ಮೊದಲ ನಾಟಕವೆಂಬ ಹೆಗ್ಗಳಿಕೆಗೆ ಪಾತ್ರವಾದ ನಾಟಕ ತೃತೀಯ ಲಿಂಗಿಗಳನ್ನು ಸಮಾಜದಲ್ಲಿ ಕಾಣುವ ರೀತಿಯನ್ನು ಎಳೆಎಳೆಯಾಗಿ ವಿವರಿಸಿದ್ದಾರೆ.
©2024 Book Brahma Private Limited.