ಲೇಖಕ-ಪತ್ರಕರ್ತ ಶೇಷಮೂರ್ತಿ ಅವಧಾನಿ ಅವರ ನಾಟಕಗಳ ಸಂಕಲನ-ಮನಸೇ ಕೊಲೆಗಾರ. ಲೇಖಕರ 6ನೇ ಕೃತಿ ಇದು. ನಾಟಕಗಳ ಸಂಗ್ರಹ ಕೃತಿಗಳ ಪೈಕಿ ಇದು ಮೊದಲನೇ ಕೃತಿ. ಮೂರು ನಾಟಕಗಳನ್ನು ಒಳಗೊಂಡಿದೆ. ಕಲಬುರಗಿ ಕಂಡ ಒಬ್ಬ ರೈತ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಸಂಗವು ಕಲಬುರಗಿಯಲ್ಲಿ ನಡೆದಿದ್ದು. ಅವುಗಳನ್ನು ಆಧರಿಸಿ ನಾಟಕಗಳ ಸಂಕಲನವಿದು.ಕಲಬುರಗಿ ಆಕಾಶವಾಣಿಯಿಂದ ಪ್ರಸಾರಗೊಂಡು, ಸುವರ್ಣ ಸಂಭ್ರಮದ ಸಂದರ್ಭದಲ್ಲಿ ಪ್ರಥಮ ಬಹುಮಾನ ಪಡೆದಿದೆ.
ಈ ಮೂರು ನಾಟಕಗಳು ವಿಭಿನ್ನ ವಸ್ತು ಹೊಂದಿದ್ದು ನಿಧಿ ನಾಟಕ ಪತ್ತೇದಾರಿ ಶೈಲಿಯಲ್ಲಿ ಮೂಡಿಬಂದಿದ್ದು ಮುಂದೇನು ಎನ್ನುವ ಕುತೂಹಲ ಉಂಟಾಗುವಂತೆ ಮಾಡುತ್ತದೆ. ಮಗುವನ್ನು ಅಪಹರಿಸಿ ನಿಧಿಗಾಗಿ ಬಲಿಕೊಡುವ ಮಾಟ-ಮಂತ್ರಗಳು ಪೂಜೆ ಮಾಡುವ ಮೌಲ್ಯದ ಅತಿರೇಕದ ದೃಶ್ಯದಿಂದ ಆರಂಭವಾಗುವ ನಾಟಕ ದೃಶ್ಯದಿಂದ ದೃಶ್ಯಕ್ಕೆ ಬೆಳೆಯುತ್ತಲೆ ಹೋಗುತ್ತದೆ. ನಿಧಿಗಾಗಿ ಬಲಿಕೊಟ್ಟ ಘಟನೆ ತನಿಖೆ ಮಾಡುವ ಪೊಲೀಸರು ಕೊನೆಗೆ ತನ್ನ ಮಗಳನ್ನೇ ಬಲಿಕೊಟ್ಟ ಅಪ್ಪನನ್ನು ಬಂಧಿಸುವ ಮೂಲಕ ಮುಕ್ತಾಯವಾಗುತ್ತದೆ.
'ಮುಳುಗುವವನಿಗೆ ಹುಲ್ಲುಕಡ್ಡಿ' ಎಂಬ ಎರಡನೇ ನಾಟಕದಲ್ಲಿ ರೈತನ ಆತ್ಮಹತ್ಯೆ ದಾರುಣತೆ ಚಿತ್ರಿಸಲಾಗಿದೆ. ನಿಸರ್ಗ ಸಹಜವಾದ ಜೀವನ ನಡೆಸುತ್ತಾ ಮಡದಿ ಮಹಾದೇವಿ, ಮಗಳು ಲಕ್ಷ್ಮಿ ಜೊತೆಗೆ ನೆಮ್ಮದಿಯಿಂದ ಇದ್ದ ರೈತನ ಹೊಲದಲ್ಲಿ ಬೆಳೆದು ನಿಂತ ತೊಗರಿ ಬೆಳೆ ಬಗ್ಗೆ ನೂರೆಂಟು ಆಸೆ ಇಟ್ಟುಕೊಂಡು ಫಸಲಿನ ದಾರಿ ಕಾಯುತ್ತಿರುತ್ತಾನೆ. ಇದ್ದಕ್ಕಿದ್ದಂತೆ ಸುರಿದ ಮಳೆಯಿಂದಾಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.
'ಮನಸೇ ಕೊಲೆಗಾರ' ಎಂಬ ಮೂರನೇ ನಾಟಕ ಕಲಬುರ್ಗಿಯಲ್ಲಿ ಜರುಗಿದ ಒಂದೇ ಕುಟುಂಬದ ನಾಲ್ವರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆಯನ್ನು ಆಧರಿಸಿದೆ. ಜೀವನದಲ್ಲಿ ಬರುವ ದುರ್ಬರ ದುರ್ಬಲ ಪ್ರಸಂಗಗಳನ್ನು ಎದುರಿಸಲು ಸಾಧ್ಯವಾಗದ ಬಲಹೀನ ಮನಸ್ಥಿತಿ ಇದ್ದವರಿಗೆ ಆತ್ಮಹತ್ಯೆಗೆ ಪ್ರಯತ್ನ ಮಾಡುತ್ತಾರೆ. ಈ ಸ್ಥಿತಿಯಲ್ಲಿ ಮನಸೇ ಕೊಲೆಗಾರ ನಾಗುತ್ತಾನೆ ಎನ್ನುವ ಮನೋವಿಕಾರ ವನ್ನು ತೋರಿಸಲು ಈ ಘಟನೆ ನಾಟಕಕ್ಕೆ ಬಳಸಿದ್ದು ಸಂದರ್ಭೋಚಿತವಾಗಿದೆ.
©2024 Book Brahma Private Limited.