ಸುಪಾರಿ ಕೊಲೆ

Author : ಶಿವಕುಮಾರ್ ಮಾವಲಿ

Pages 83

₹ 100.00




Year of Publication: 2018
Published by: ಡಿ ಪಿಕ್ಚರ್‍ಸ್‌
Address: #54, ಶೇಷಾದ್ರಿ ರಸ್ತೆ, 004, ಎಚ್.ಎಂ ಗ್ರೀನ್ ಓಕ್ ಅಪಾರ್ಟ್‌ಮೆಂಟ್‌, ಮಾರಪ್ಪ ಉದ್ಯಾನ, ಬೆನ್‌ ಟೌನ್‌ ಪೋಸ್ಟ್‌, ಬೆಂಗಳೂರು-46
Phone: 9243455672

Synopsys

‘ಸುಪಾರಿ ಕೊಲೆ’ ನಾಟಕ ಒಂದೇ ಜಾಡನ್ನು ಹಿಡಿದಿರದೆ, ಸಾಮಾಜಿಕ ಬದ್ಧತೆ ಮತ್ತು ಕಲಾ ಫ್ರೌಡಿಮೆ ಹೊಂದಿರುವ ಚುರುಕು ಸಂಭಾಷಣೆ ಇಲ್ಲಿದೆ. ಓದಿನಲ್ಲಿ ಮತ್ತು ಪ್ರದರ್ಶನದಲ್ಲಿ ಯಶಸ್ಸು ಕಂಡಿರುವ ಈ ಸುಪಾರಿ ಕೊಲೆ ಇತ್ತೀಚಿಗೆ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ. “ಸಿನಿಮೀಯ ರೀತಿಯಲ್ಲಿ ನಾಟಕಗಳನ್ನು ಕಟ್ಟುವಿಕೆ ತುಂಬ ಕಷ್ಟದ ವಿಚಾರ. ನಾಟಕದಲ್ಲಿ ಬರುವ ಪಾತ್ರಗಳ ಮೂಲಕ ವಾಚ್ಯಾರ್ಥವನ್ನು ರೂಪಿಸುತ್ತಾ,, ಸಿನಿಮೀಯ ರೀತಿಯಲ್ಲಿ ರೋಚಕತೆಯನ್ನು ಉಳಿಸಿಕೊಂಡು, ಒಂದು ಚಂದದ ಕಥೆಯನ್ನು ಹೆಣೆಯುವಲ್ಲಿ “ಸುಪಾರಿ ಕೊಲೆ” ಯಶಸ್ವಿಯಾಗಿದೆ. ಕೊಲೆಗಳಿಗೆ ಸಂಬಂಧಿಸಿದಂತೆ ಹಲವಾರು ಕಥೆಗಳು ಬಂದಿದ್ದರೂ, ಶೀರ್ಷಿಕೆಯೇ ಹೇಳುವಂತೆ ಇದೊಂದು ಸುಪಾರಿ ಕೊಲೆಯ ಸುತ್ತ ಸುತ್ತುವ ನಾಟಕವಾಗಿದೆ.

ಕೊಲೆಗಾರನ ವೃತ್ತಿಪರ ಸಿದ್ಧಾಂತಗಳು ಅವನನ್ನು ಹೇಗೆ ಪೇಚಿಗೆ ಸಿಕ್ಕಿಸುತ್ತದೆ ಎಂಬುದನ್ನು ಇಲ್ಲಿ ತುಂಬಾ ನಾಜೂಕಾದ ದೃಶ್ಯಗಳನ್ನು ಕಟ್ಟುವಿಕೆಯ ಮೂಲಕ ಶಿವಕುಮಾರ್ ತಮ್ಮ ಪ್ರೌಢಿಮೆ ಮೆರೆದಿದ್ದಾರೆ. ಕಥೆಯಾಗಿ ಓದಿಸಿಕೊಳ್ಳಬಹುದಾದ ಈ ಕಥೆ ನಾಟಕಕ್ಕೆ ರೂಪಾಂತರವಾದಾಗ ರೋಚಕತೆಯನ್ನು ಹೇಗೆ ಉಳಿಸಿಕೊಳ್ಳುತ್ತದೆ. 

ಚಂದ್ರಶೇಖರ್ ನಿರ್ದೇಶನದಲ್ಲಿ ಕಥೆಗೆ ಮೋಸವಾಗಿಲ್ಲ. ಕಥೆ ಬರೆದ ಶಿವಕುಮಾರ್ ಮಾವಲಿ ಹಾಗೂ ಅದನ್ನು ಮೊದಲಿಗೆ ರಂಗದ ಮೇಲೆ ತಂದ ಹೊಂಗಿರಣ ತಂಡಕ್ಕೆ ಶುಭವಾಗಲಿ” ಎಂದಿದ್ದಾರೆ ‘ರಾಮಾ ರಾಮಾ ರೇ’ ಖ್ಯಾತಿಯ ನಟ ನಟರಾಜ್ ಎಸ್ ಭಟ್.

About the Author

ಶಿವಕುಮಾರ್ ಮಾವಲಿ

ಶಿವಕುಮಾರ್ ಮಾವಲಿ ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಮಾವಲಿಯವರು. ಶಿವಮೊಗ್ಗದ ಡಿ.ವಿ.ಎಸ್. ಹಾಗೂ ಸಹ್ಯಾದ್ರಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿದ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ.ಪದವಿ ಪಡೆದಿದ್ದಾರೆ.  ಸದ್ಯ ಇಂಗ್ಲೀಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಶಿವಕುಮಾರ್  ಪ್ರತಿಭಾವಂತ ಬರಹಗಾರ. ಕಥೆ, ಕವಿತೆ, ನಾಟಕ ಹೀಗೆ ಸಾಹಿತ್ಯದ ಹಲವು ವಿಭಾಗಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ಶಿವಕುಮಾರ್ ಅವರ ಮೊದಲ ಕಥಾಸಂಕಲನ ‘ದೇವರು ಅರೆಸ್ಟ್ ಆದ’ ಅವರ ‘ಸುಪಾರಿ ಕೊಲೆ’ ನಾಟಕ ಸಿನಿಮವಾಗುತ್ತಿದೆ. ಅವರ ಇತ್ತೀಚಿನ ಪುಸ್ತಕ ಟೈಪಿಸ್ಟ್ ತಿರಸ್ಕರಿಸಿದ ಕಥೆ. ಈ ಕೃತಿಯನ್ನು ಬಹುರೂಪಿ ...

READ MORE

Related Books