‘ಕನ್ನಡ ಪ್ರಥಮ ಸಾರ್ವಭೌಮ ಮಯೂರ ಶರ್ಮ’ ಕೃತಿಯು ಬಿ.ಎಚ್. ಶ್ರೀಧರ ಅವರ ಚಾರಿತ್ರಿಕ ನಾಟಕ ಸಂಕಲನವಾಗಿದೆ. ತಾಳಗುಂದದ ಶಾಸನವು ಮಯೂರ ಶರ್ಮನ ಮೊಮ್ಮೊಗನಾದ ಕಾತ್ ಸ್ಥವರ್ಮ ಶಾಂತಿವರ್ಮರದು. ಅದರ ಕಾಲ ಕ್ರಿ.ಶ. 456. ಬರೋಡ ವಿಶ್ವವಿದ್ಯಾನಿಲಯದ “The Abiras ಅಭೀರರಂ” ಎಂಬ ಮಹಾಪ್ರಬಂಧದಲ್ಲಿ ಮಯೂರ ಶರ್ಮನ ಉಲ್ಲೇಖವಿದೆ ಎಂಬುವುದನ್ನು ಈ ಕೃತಿಯು ತಿಳಿಸುತ್ತದೆ. ಹಾಗೆಯೇ ಹಲವಾರು ರೀತಿಯ ವಿಚಾರಗಳನ್ನು ನಾಟಕದ ಮೂಲಕ ಪ್ರಸ್ತುತಪಡಿಸುತ್ತದೆ.
ಕವಿ, ಅನುವಾದಕ, ಪ್ರಬಂಧಕಾರ ಶ್ರೀಧರರು ಹುಟ್ಟಿದ್ದು ದ. ಕನ್ನಡ ಜಿಲ್ಲೆಯ ಬಿಜೂರು ಗ್ರಾಮದ ಬವಲಾಡಿಯಲ್ಲಿ. ತಂದೆ ಸೀತಾರಾಮ ಹೆಬ್ಬಾರರು, ತಾಯಿ ನಾಗಮ್ಮ. ಬಾರ್ಕೂರಿನಿಂದ ಬವಲಾಡಿಗೆ ಬಂದು ನೆಲೆಸಿದ ವಂಶಸ್ಥರು. ಪ್ರಾಥಮಿಕದಿಂದ ಹೈಸ್ಕೂಲು ವರೆಗೆ ಸೊರಬ, ಸಾಗರದಲ್ಲಿ ವಿದ್ಯಾಭ್ಯಾಸ, ಇಂಟರ್ ಮೀಡಿಯೆಟ್‌ಗೆ ಸೇರಿದ್ದು ಮೈಸೂರು. ಊಟಕ್ಕೆ ವಾರಾನ್ನ, ಪುಸ್ತಕಗಳಿಗೆ ಗ್ರಂಥಾಲಯ, ಫೀಸಿಗೆ ಸ್ಕಾಲರ್‌ಶಿಪ್, ಇಂಟರ್ ಮೀಡಿಯೆಟ್ ಮುಗಿಸಿದರು. ದೊರೆತ ಶಿಷ್ಯ ವೇತನ, ಮನೆ ಪಾಠ ಹೇಳಿ ತಂದೆಗೂ ಹಣ ಸಹಾಯ. ಬಿ.ಎ. ಆನರ್ಸ್ ಪಾಸು. ಹಲವಾರು ಪದಕ ಬಹುಮಾನ ಗಳಿಕೆ ಸಂತಸ. ಆದರೆ ಎಂ.ಎ. ಓದಲು ಹಣದ ಅಡಚಣೆಯಿಂದ ಬೆಂಗಳೂರಿನ ಪ್ರೆಸ್ ...
READ MORE