ಜಡಭರತ ಎಂದೇ ಖ್ಯಾತಿಯ ಜಿ.ಬಿ.ಜೋಶಿ ಅವರ ಕೃತಿ-ಆಶು ನಾಟಕಗಳು. ಮೂರು ಏಕಾಂಕಗಳನ್ನು ಸಂಕಲಿಸಲಾಗಿದೆ. ಒಂದು ದಿನದಲ್ಲಿ ಒಂದು ಕವಿತೆಯನ್ನು ಕಟ್ಟಿ ಮುಗಿಸಲು ಆಗದ್ದಕ್ಕೆ ಕವಿಯ ಸೋಲು ಎಂಬ ನಾಟಕ, ಲಾಟರಿಯಲ್ಲಿ ಒಂದು ಲಕ್ಷ ರೂಪಾಯಿ ಗೆದ್ದು ಉನ್ಮತ್ತನಾದ ಭಾಗ್ಯವಂತನ ಒಂದು ದಿನಚರ್ಯ ನಾಟಕ-ಸೌಭಾಗ್ಯ ಮತ್ತು ಸಾಲಗಾರರನ್ನು ತಪ್ಪಿಸಿ ಸಂಸಾರ ಮಾಡುವ ರೀತಿ-ನಾಟಕ ಸಾಲದ ಕೈ- ಈ ಮೂರು ಏಕಾಂಕಗಳನ್ನು ಸಂಗ್ರಹಿಸಿದ ಕೃತಿ ಇದು. ಬಾಗಲಕೋಟೆ, ಗದಗ ಹಾಗೂ ಬೆಂಗಳೂರು ಜಿಲ್ಲೆಯವರು ನಾಟಕ ಅಭಿನಯಿಸಿ ಗೆದ್ದರು. ಆಶು ನಾಟಕಗಳು ಸಮಯಸ್ಫೂರ್ತಿಯಿಂದ ಉತ್ತಮ ಕಥಾ ವಸ್ತು ಹಾಗೂ ಪ್ರದರ್ಶನಾ ಕಲೆಯಿಂದ ಕಂಗೊಳಿಸಿದ್ದವು ಎಂದು ಲೇಖಕರು ಹೇಳಿದ್ದಾರೆ.
©2024 Book Brahma Private Limited.