ಸಾಕು ತಂದೆ ರೂಮಿ

Author : ಎನ್.ಸಿ. ಮಹೇಶ್

Pages 104

₹ 130.00




Year of Publication: 2023
Published by: ಅಂಕಿತ ಪುಸ್ತಕ
Address: #53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004.
Phone: 080 - 2661 7100 / 2661 7755

Synopsys

'ಸಾಕು ತಂದೆ ರೂಮಿ’ ಎನ್‌. ಸಿ ಮಹೇಶ್‌ ಅವರ ರಚನೆಯ ನಾಟಕವಾಗಿದೆ. ‘ಸಾಕುತಂದೆ ರೂಮಿ’ ನಾಟಕವನ್ನ ರಂಗಕೃತಿಯಾಗಿ ಓದಲು, ರಂಗದ ಮೇಲೆ ತರಲೂ ಒಂದು ಸಿದ್ಧತೆ ಬೇಕು. ಪ್ರೇಕ್ಷಕರಿಗೂ ಈ ನಾಟಕ ಸ್ವೀಕರಿಸಲು ಕೂಡ ಬಹುದೊಡ್ಡ ಮಾನಸಿಕ ಭಾವನಾತ್ಮಕ ಬೌದ್ಧಿಕ ಸಿದ್ಧತೆಯಂತೂ ಬೇಕೇ ಬೇಕು. ಇಲ್ಲದೆ ಹೋದರೆ ಕೆಲವರಿಗೆ ನಿರಾಶೆಯಾಗಬಹುದು, ಕೆಲವರಿಗೆ ಅಸಹನೀಯ ಎನ್ನಿಸಬಹುದು, ಎಲ್ಲೋ ಕೆಲವರಿಗೆ ಮುಕ್ತಮನಸ್ಸಿನಿಂದ ಹೋದವರಿಗೆ ಹೊಸದೇನೋದಕ್ಕಬಹುದು. ಈ ನಾಟಕ ನಮ್ಮ ಈವರೆಗಿನ ತಿಳುವಳಿಕೆಯನ್ನ ಅಳಿಸಿಹಾಕಿ ಹೊಸ ಆಲೋಚನಾ ಕ್ರಮವನ್ನ ಹುಟ್ಟುಹಾಕುವ ಪರಿಗೆ ಬೆರಗು ಮೂಡುತ್ತದೆ. ನಮ್ಮ ದೇಹದ ವ್ಯಾಖ್ಯಾನ, ನಮ್ಮ ಹೃದಯದ ವ್ಯಾಖ್ಯಾನ, ನಮ್ಮ ಉಸಿರಿನ ವ್ಯಾಖ್ಯಾನ ನಮ್ಮ ಬದುಕಿನ ವ್ಯಾಖ್ಯಾನಗಳನ್ನೆಲ್ಲ ಇದು ಹಿಂದಕ್ಕೆ ಸರಿಸಿ ಹೊಸದೇ ಆದ ದೃಷ್ಟಿಕೋನವನ್ನ ಹುಟ್ಟುಹಾಕುತ್ತದೆ. ಹಾಗಾಗಿ ಈ ಔನ್ನತ್ಯಕ್ಕೆ ತಲುಪುವುದು ಯಾವುದೇ ಒಬ್ಬ ಸೃಜನಶೀಲ ಬರಹಗಾರನ ಸಾರ್ಥಕತೆಯೇ ಸರಿ. ‘ಸಾಕುತಂದೆ ರೂಮಿ’ ಯ ಮೂಲಕ ಕನ್ನಡ ಸೃಜನಶೀಲ ನಾಟಕ ಪರಂಪರೆಗೆ ಕಾವ್ಯದ ಹೊಸ ತಂಗಾಳಿ ಬೀಸಿದಂತಾಗಿದೆ.

About the Author

ಎನ್.ಸಿ. ಮಹೇಶ್

ಹುಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಾಗದಲ್ಲಿರುವ ಬೆಣಚನಹಳ್ಳಿಯಲ್ಲಿ. ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ. ನಂತರ ಕೆಲಕಾಲ ಕನ್ನಡ ಪ್ರಭ ಹಾಗೂ ಪ್ರಜಾವಾಣಿ ಪತ್ರಿಕೆಗಳಲ್ಲಿ ಕಾರ್ಯನಿರ್ವಹಣೆ. ಮೇಷ್ಟ್ರು ವೃತ್ತಿ ಬಗ್ಗೆ ಮೊದಲಿಂದ ತೀವ್ರತರ ಒಲವು. ಪರಿಣಾಮವಾಗಿ ಕೆಲ ಕಾಲ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿ ಕಾರ್ಯನಿರ್ವಹಣೆ. ಪ್ರಸ್ತುತ  ಸುರಾನ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕನ ಕೆಲಸ. ಸಾಹಿತ್ಯ, ಸಂಗೀತ ಮತ್ತು ರಂಗಭೂಮಿಯಲ್ಲಿ ಹೆಚ್ಚಿನ ಆಸಕ್ತಿ. ‘ಬೆಳಕು ಸದ್ದುಗಳನ್ನು ಮೀರಿ’ , ‘ ಸರಸ್ವತಿ ಅಕಾಡಮಿ’- ಕಥಾಸಂಕಲನಗಳು. ‘ ತಮ್ಮ ತೊಟ್ಟಿಲುಗಳ ತಾವೇ ಜೀಕಿ’ – ಕಾದಂಬರಿ. ‘ ...

READ MORE

Related Books