ಕರ್ನಾಟಕದ ಬರ್ನಾಡ್ ಷಾ ಎಂದೇ ಖ್ಯಾತಿಯ ಟಿ.ಪಿ, ಕೈಲಾಸಂ ಅವರ ನಾಟಕಗಳ ಕೃತಿ-ಮೂರು ನಾಟಕಗಳು. ವೈದ್ಯನ ವ್ಯಾದಿ, ಸೀಕರ್ಣೆ ಸಾವಿತ್ರಿ ಹಾಗೂ ಗಂಡಸ್ಕತ್ರಿ. ಪಕ್ಕಾ ಆಡು ಮಾತಿನ ವೈಶಿಷ್ಟವೇ ಕೈಲಾಸಂ ನಾಟಕಗಳ ಹೆಗ್ಗಳಿಕೆ. ಭಾವಗಳ ಪೂರ್ಣತೆ ಯು ಪ್ರೇಕ್ಷಕರೆದುರು ಎಳೆದು ತರುವುದು ಇದರ ಉದ್ದೇಶ. ಹೀಗಾಗಿ, ಪ್ರತಿ ಪಾತ್ರಗಳ ಭಾವ, ನಾಟಕದ ಒಟ್ಟು ಉದ್ದೇಶ ಪ್ರೇಕ್ಷಕರಿಗೆ ಹಾಗೂ ಓದುಗರಿಗೆ ಆಪ್ತವಾಗುವುದು ಈ ಕಾರಣಕ್ಕಾಗಿ. ಜೊತೆಗೆ ಮನರಂಜನೆಯೂ ಈ ನಾಟಕಗಳ ಜೀವಾಳ.
ಕನ್ನಡ ನಾಟಕರಂಗದಲ್ಲಿ ಹೊಸಶಕೆಯನ್ನು ಆರಂಭಿಸಿದ ಟಿ ಪಿ. ಕೈಲಾಸಂ ಅವರು ಬೆಂಗಳೂರಿನಲ್ಲಿ 26-07-1885ರಲ್ಲಿ ತ್ಯಾಗರಾಜ ಪರಮಶಿವ ಅಯ್ಯರ್ – ಕಲಮಮ್ಮ ದಂಪತಿಗಳ ಪುತ್ರರಾಗಿ ಜನಿಸಿದರು. ಬೆಂಗಳೂರು, ಹಾಸನ, ಮೈಸೂರುಗಳಲ್ಲಿ ಶಾಲಾ ಶಿಕ್ಷಣ ಮುಗಿಸಿ 1908ರಲ್ಲಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿ ಬಿ ಎ ಪದವಿಗಳಿಸಿದರು. ಪ್ರೌಢವ್ಯಾಸಂಗಕ್ಕೆ ಲಂಡನ್ನಿಗೆ ತೆರಳಿ 6 ವರ್ಷಗಳ ಕಾಲ ಭೂಗರ್ಭಶಾಸ್ತ್ರ ಅಭ್ಯಸಿಸಿ 1915ಕ್ಕೆ ಬೆಂಗಳೂರಿಗೆ ಹಿಂತಿರುಗಿದರು. ಭೂಗರ್ಭಶಾಸ್ತ್ರ ಇಲಾಖೆಯಲ್ಲಿ ಭೂಶೋಧಕರಾಗಿ ಸೇರಿ 5 ವರ್ಷ ಉದ್ಯೋಗ ಮಾಡಿದರು. ಅನಂತರ ರಾಜೀನಾಮೆ ನೀಡಿ ರಂಗಭೂಮಿಯ ಚಟುವಟಿಕೆಗಳಲ್ಲಿ ನಿರತರಾದರು. ವ್ಯಾಯಾಮಕ್ಕೆ ಹೆಚ್ಚು ಒತ್ತು ಕೊಟ್ಟಿದ್ದ ಕೈಲಾಸಂ ಕನ್ನಡ ...
READ MORE