ಲೇಖಕ ಆನಂದ ಋಗ್ವೇದಿ ಅವರ ನಾಟಕ ಕೃತಿ ‘ಉರ್ವಿ. ಅಖಿಲ ಭಾರತ 71ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯು ಪುಸ್ತಕ ಪ್ರಕಟಣೆಗೆ ನೀಡುವ ಧನಸಹಾಯ ಯೋಜನೆಯಡಿ ಈ ಕೃತಿ ಪ್ರಕಟಗೊಂಡಿದೆ. ಸಾಹಿತಿ ಎ.ಎಸ್. ಪ್ರಭಾಕರ ಅವರು ಕೃತಿಗೆ ಬೆನ್ನುಡಿ ಬರದು ‘ಉರ್ವಿ -ಈ ನೆಲದ, ಸಮಾಜದ ಕಥೆ. ಸಮಾಜ ಸಂಘರ್ಷದ ಕಥೆ. ಈ ನೆಲ ತಮ್ಮದೇ ಎಂದು ತಿಳಿದಿರುವ ಆಳುವ ದೊರೆಗಳ ಅಹಂಕಾರ ಹಾಗೂ ಆಳಿಸಿಕೊಳ್ಳುತ್ತಿರುವ ಸಹಾಯಕರ ಪ್ರತಿರೋಧಗಳ ತೀವ್ರತೆಗಳನ್ನು ಕಟ್ಟಿಕೊಡುವ ಕಥೆ. ಪೌರಾಣಿಕ ಸನ್ನಿವೇಶದ ವಿನ್ಯಾಸವೊಂದರಲ್ಲಿ ಆಧುನಿಕ ಇಂಡಿಯಾ ಈ ನಾಟಕ ಅನಾವರಣ ಮಾಡುತ್ತದೆ. ಉರ್ವಿಯನ್ನು ಓದುತ್ತಿದ್ದಂತೆ ಭಾರತ ಸರ್ಕಾರ ಹಠಕ್ಕೆ ಬಿದ್ದು ಕಟ್ಟಿದ ಸರ್ದಾರ ಸರೋವರದಲ್ಲಿ ಮುಳುಗಿ ಸತ್ತ ಆದಿವಾಸಿಗಳು, ಗುಜರಾತಿನ ಕಗ್ಗೊಲೆಗಳಲ್ಲಿ ಪ್ರಾಣಬಿಟ್ಟ ಅಮಾಯಕರು ಕಣ್ಣೆದುರು ನಿಲ್ಲುತ್ತಾರೆ. ವರ್ತಮಾನದ ಹಿಂಸೆ ಹಾಗೂ ತಲ್ಲಣಗಳನ್ನುಸರಳವಾಗಿ ಹಾಗೂ ತೀವ್ರವಾಗಿ ಹೇಳುವ ಕ್ರಮವೇ ಈ ನಾಟಕವನ್ನು ಸಮಕಾಲೀನ ಗೊಳಿಸುತ್ತದೆ. ತಮ್ಮ ಹಕ್ಕುಗಳಿಗಾಗಿ ಎಚ್ಚೆತ್ತು ನಿಂತವರಿಗೆ, ಮಾನವತೆಯನ್ನು ಕನಸುವವರಿಗೆ ಹಾಗೂ ಪ್ರತಿರಾಜಕಾರಣವನ್ನು ಹಂಬಲಿಸುವವರಿಗೆ ಈ ನಾಟಕ ಇಷ್ಟವಾಗುತ್ತದೆ’ ಎಂದು ಪ್ರಶಂಸಿಸಿದ್ದಾರೆ.
ಹೊಸತು-2004- ಮೇ
ಪುರಾಣಗಳಲ್ಲಿ ನಾವು ಓದುತ್ತಿರುವ ವಿಷಯಗಳಿಗೂ ಇಂದಿನ ಈ ನಮ್ಮ ನೆಲದ ಮೇಲೆ ನಡೆಯುವ ಘಟನೆಗಳಿಗೂ ಸಾಮ್ಯತೆ ಇದೆಯೇ ? ಅವುಗಳೆಲ್ಲಾ ಮರುಕಳಿಸುವಂತೆ ನಮಗೆ ಅನ್ನಿಸುತ್ತಿದೆಯೇ ? ಕೌರ್ಯ-ಹಿಂಸೆ- ಶಾಂತಿ-ಪ್ರೇಮ ಮಾತ್ರವಲ್ಲ ಉತ್ತಮ ಹಾಗೂ ಅಧಮ ವಿಚಾರಗಳೆಲ್ಲವೂ ಎಲ್ಲ ಕಾಲದಲ್ಲೂ ಮನುಷ್ಯನನ್ನು ಕಾಡಿವೆ. ದುರಹಂಕಾರ ದರ್ಪ ಯಾವ ರಾಜಮನೆತನದವರನ್ನೂ ಬಿಟ್ಟಿಲ್ಲ ವಾದ್ದರಿಂದಲೇ ಖಾಂಡವ ದಹನ ರಾಜಸೂಯದಂಥ ಅತಿರೇಕಗಳು ವಿಜೃಂಭಿಸಿದವು. ಪುರಾಣದ ಪಾತ್ರಗಳನ್ನು ಮುಂದಿಟ್ಟು ವಾಸ್ತವವನ್ನೂ ತಿಳಿಸುವ ಒಂದು ನಾಟಕ.
©2024 Book Brahma Private Limited.