ಲೇಖಕ ಮೌನೇಶ ಬಡಿಗೇರ ಅವರ ನಾಟಕ ಕೃತಿ ʻವಿಶಾಂಕೇʼ ಅರ್ಥಾತ್ ವಿಧ್ವಂಸಕ ಶಾಂತಿ ಕೇಂದ್ರ. ಪುಸ್ತಕದ ಕುರಿತು ಲೇಖಕರು, “ನಾಯಕ ವಿದೂಷಕನಾಗುವ, ವಿದೂಷಕ ನಾಯಕನಾಗುವ ಚೋದ್ಯ ಈ ನಾಟಕದ ಕೇಂದ್ರವಸ್ತು. ಇದನ್ನು ಸರಿಯಾಗಿ ಅರ್ಥೈಸಿಕೊಂಡು ಇಡೀ ನಾಟಕವನ್ನು ಹೇಗೆಬೇಕಿದ್ದರೂ ಮುರಿದುಕಟ್ಟುವ ಸ್ವಾತಂತ್ರ್ಯ ನಿರ್ದೇಶಕರಿಗೆ ಖಂಡಿತಾ ಇದೆ. ಆಯಾ ಕಾಲ- ದೇಶದ ಸಾಮಾಜಿಕ ಹಾಗೂ ರಾಜಕೀಯ ಸ್ಥಿತಿಗತಿಗಳಿಗೆ ಅನುಗುಣವಾಗಿ ಹೊಸ ಹೊಸ ದೃಶ್ಯಗಳನ್ನು ಸೇರಿಸಿಕೊಳ್ಳಬಹುದು, ಅಥವಾ ತೆಗೆದು ಹಾಕಲೂಬಹುದು! ಹಾಗಾಗಿ ಇದನ್ನು ನಾನು ಸ್ವಸಂಪೂರ್ಣ ನಾಟಕ ಪಠ್ಯ ಎಂದು ಕರೆಯಲಾರೆ! ಇದನ್ನು ಓದುವವರಿಗೂ ಸಹ ಇದು ಅಸಂಪೂರ್ಣ ಎನಿಸಬಹುದು. ಅದು ಇದರ ಸ್ವಾತಂತ್ರ್ಯ ಎಂದು ತಿಳಿದಿದ್ದೇನೆಯೇ ಹೊರತು ದೋಷ ಎಂದು ತಿಳಿದಿಲ್ಲ. ಹಾಗೆ ತಿಳಿಯುವವರಿಗೆ ನನ್ನದೇನೂ ಆಕ್ಷೇಪಣೆ ಇಲ್ಲ” ಎಂದು ಹೇಳಿದ್ದಾರೆ.
ರಂಗನಿರ್ದೇಶಕ, ನಟ ಮೌನೇಶ್ ಬಡಿಗೇರ ಕತೆಗಾರ ಕೂಡ. ’ಮಾಯಾ ಕೋಲಾಹಲ’ ಪ್ರಕಟಿತ ಕತೆಗಳ ಸಂಕಲನ. ಸೂಜಿದಾರ’ ಎಂಬ ಚಿತ್ರ ನಿರ್ದೇಶಿಸಿದ್ದಾರೆ. ಕನ್ನಡ ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಮೌನೇಶ ಅಭಿನಯ ಕಲಿಕೆಯ ಕಾರ್ಯಾಗಾರ ನಡೆಸುತ್ತಿದ್ದಾರೆ. ʻಮಾಯಾಕೋಲಾಹಲʼ ಸಂಕಲನಕ್ಕೆ 2015ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ, ಟೊಟೊ ಪುರಸ್ಕಾರ', 'ಡಾ. ಯು ಆರ್ ಅನಂತಮೂರ್ತಿ ಪುರಸ್ಕಾರ', `ಬಸವರಾಜ ಕಟ್ಟಿಮನಿ ಪುರಸ್ಕಾರ ಪಡೆದಿದ್ದಾರೆ. “ವಿಶಾಂಕೇ ಅರ್ಥಾತ್ ವಿಧ್ವಂಸಕ ಶಾಂತಿ ಕೇಂದ್ರ' ('ರಂಗಭೂಮಿ' ಉಡುಪಿ ನಡೆಸಿದ 'ಡಾ. ಹೆಚ್. ಶಾಂತಾರಾಮ್ ವಿಶ್ವ ಕನ್ನಡ ನಾಟಕ ರಚನಾ ಸ್ಪರ್ಧೆ'ಯಲ್ಲಿ ಪ್ರಥಮ ಬಹುಮಾನ ಪಡೆದ ಕೃತಿ) ಹಾಗೂ 'ಟಪಾಲುಮನಿ'(ರವೀಂದ್ರನಾಥ ಠಾಕೂರರ ಡಾಕ್‌ಘರ್ ...
READ MORE