ಲೇಖಕಿ ಜಯಶ್ರೀ ಸಿ. ಕಂಬಾರ ಅವರ ‘ಹೊಸದಾರಿ’ ಕೃತಿಯು ನಾಟಕವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಲೇಖಕಿ ಪದ್ಮಿನಿ ನಾಗರಾಜು ಅವರು, `ಕತ್ತಿಯ ಅಲಗಿಗೆ ಸಿಕ್ಕಿಕೊಂಡ ಮಹಿಳೆಯರ ಮುಖದ ಅನಾವರಣವನ್ನು 'ಹೊಸ ದಾರಿ' ನಾಟಕ ಸಮರ್ಥವಾಗಿ ಕಟ್ಟಿಕೊಡುತ್ತದೆ. ಪರಂಪರೆಯಿಂದ ನಂಬಿಕೊಂಡು ಬಂದ ಸ್ತ್ರೀಯರಿಗೆ ಸ್ವಾತಂತ್ರವನ್ನು ಕೊಡಬಾರದೆಂಬುದನ್ನು ತನ್ನ ಮುಂದಿನ ಪೀಳಿಗೆಗೆ ದಾಟಿಸಬಾರದೆಂದು ನಂಬಿದ ಸುಮತಿ , ತನ್ನ ಇಬ್ಬರು ಹೆಣ್ಣು ಮಕ್ಕಳಿಗೆ ಸ್ವಾತಂತ್ರವನ್ನು ಪತಿಯ ವಿರೋಧದ ನಡುವೆಯೂ ನೀಡುವುದು, ಜಾಗತೀಕರಣದ ಪ್ರಭಾವದಿಂದ ಭಾರತಕ್ಕೂ ಕಾಲಿಟ್ಟಿರುವ ನೈಟ್ ಔಟ್, ಲಿವಿಂಗ್ ಟು ಗದರ್‌ನ ಪರಿಣಾಮವನ್ನು ನಂದಿನಿ ಅನುಭವಿಸುವ, ನಂಬುವ ಅವಳ ಸ್ವತಂತವಾಗಿ, ಸ್ವಾವಲಂಬಿಯಾಗಿ ಬದುಕಬೇಕೆನ್ನುವ ಚಿಂತನೆಯನ್ನು ಚೂರು ಮಾಡುವಂತಹ ಪ್ರಕರಣ ಇಲ್ಲಿ ನಡೆಯುತ್ತದೆ. ಕಂಪನಿಯಿಂದ ರಾತ್ರಿ ಕೆಲಸ ಮುಗಿಸಿ ಬರುತ್ತಿದ್ದ ನಂದಿನಿಯ ಮೇಲೆ ಕ್ಯಾಬ್ ಡ್ರೈವರ್‌ನೇ ತನ್ನ ಸಂಗಾತಿಗಳ ಜೊತೆ ಸೇರಿ ಅತ್ಯಾಚಾರ ಮಾಡಿದಾಗ ನಂದಿನಿಯ ತಂದೆ-ತಾಯಿ ಮತ್ತದೇ ಲೋಕದ ಅಪವಾದಕ್ಕೆ ಹೆದರಿ ಸ್ವಂತ ಮಗಳನ್ನೇ ಕೊಂದು ಹಾಕುವ ನಿರ್ಧಾರಕ್ಕೆ ಬರುವ ವಿಷಯ ಮನಕಲಕುವಂತೆ ಮೂಡಿ ಬಂದಿದೆ. ಬ್ರೇಕಿಂಗ್ ನ್ಯೂಸ್‌ಗಾಗಿಯೇ ಹಪಹಪಿಸುವ ಮಾಧ್ಯಮಗಳು ಇಂತಹ ವಿಚಾರವನ್ನು ಮಾನವೀಯತೆಯೂ ಇಲ್ಲದೆ ಇಡೀ ದಿನ ಬಿತ್ತರಿಸುವ, ಬರೆಯುವ ನೈಜ ಚಿತ್ರಣ ಇಲ್ಲಿದೆ’ ಎಂದಿದ್ದಾರೆ.
©2024 Book Brahma Private Limited.