ಲೇಖಕ ನಾಗರಾಜ ಕೋಟೆ ಅವರ ಬರೆದ ಕೃತಿ-ಹತ್ತು ಮುತ್ತು. ಮಕ್ಕಳಿಗಾಗಿ ಬರೆದ 10 ನೀತಿಯುಕ್ತ ನಾಟಕಗಳನ್ನು ಸಂಕಲಿಸಲಾಗಿದೆ. ಸಂಭಾಷಣೆಯು ತೀರಾ ಸರಳವಾಗಿದ್ದು, ಮಕ್ಕಳು ಆಪ್ತವಾಗಿ ಉಚ್ಛರಿಸುವಂತಿವೆ. ಮಕ್ಕಳ ಮನೋವಿಕಾಸದಲ್ಲೂ ಇಲ್ಲಿಯ ಕಥಾ ವಸ್ತುವು ಪೂರಕವಾಗುವಂತಿದೆ. ವಸ್ತು, ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ನಾಟಕಗಳು ಓದುಗರ-ಪ್ರೇಕ್ಷಕರ ಗಮನ ಸೆಳೆಯುತ್ತವೆ.
ಲೇಖಕ ನಾಗರಾಜ ಕೋಟೆ ಅವರು ಕಿರು ತೆರೆ, ಚಲನಚಿತ್ರ ನಟರು. ವೃತ್ತಿರಂಗ ಭೂಮಿ ಹಾಗೂ ಹವ್ಯಾಸ ಕಲಾವಿದರು. ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದವರು. ಬಾನಾಡಿ ಎಂಬ ಚಲನಚಿತ್ರಕ್ಕೆ ಇವರು ಕಥೆ-ಚಿತ್ರಕಥೆ ಹಾಗೂ ಸಂಭಾಷಣೆ ಬರರೆದಿದ್ದು, ಇದು, 10ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅಂತರಾಷ್ಟ್ರೀ ಚಿತ್ರೋತ್ಸವ ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯದಿಂದ ‘ಅತ್ತುತ್ಯಮ ಮಕ್ಕಳ ಚಿತ್ರ ಪ್ರಶಸ್ತಿ ಪಡೆದಿದೆ. ಕೃತಿಗಳು: ಹತ್ತು ಮುತ್ತು (ಮಕ್ಕಳ 10 ನೀತಿಯುಕ್ತ ನಾಟಕಗಳು), ಪ್ರಶಸ್ತಿ-ಪುರಸ್ಕಾರಗಳು: ಚನ್ನರಾಯಪ್ಪಣ್ಣದ ಯುವಕರ ಬಳಗದಿಂದ "ಹಾಸ್ಯಚಾಣಕ್ಯ" ಪ್ರಶಸ್ತಿ, ಮೈಸೂರಿನ ದೇ.ಜ.ಗೌ.ಅಕಾಡಮಿಯಿಂದ ಹಾಸ್ಯಶ್ರೀ ಪ್ರಶಸ್ತಿ, ಹೈದರಾಬಾದ್-ಕರ್ನಾಟಕ ಸಾಂಸ್ಕೃತಿ ವೇದಿಕೆ ಹೂಸಪೇಟೆದಿಂದ ಬೀಚಿ ಪ್ರಶಸ್ತಿ, ರಂಗಬಳಗ ಶಿರಸಿ ಇವರಿಂದ ...
READ MORE