ಅನುಕೂಲಕ್ಕೊಬ್ಬಣ್ಣ ಬಹಿಷ್ಕಾರ

Author : ಟಿ.ಪಿ. ಕೈಲಾಸಂ

Pages 72

₹ 35.00




Published by: ಅಂಕಿತ ಪುಸ್ತಕ
Address: (ಪ್ರಕಾಶಕರು ಮತ್ತು ಪುಸ್ತಕ ಮಾರಾಟಗಾರರು), 53, ಶ್ಯಾಮ್ ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು- 560 004
Phone: 08026617100

Synopsys

ಟಿ.ಪಿ.ಕೈಲಾಸಂ ಅವರ ನಾಟಕಗಳ ಸಂಗ್ರಹ ಅನುಕೂಲಕ್ಕೊಬ್ಬಣ್ಣ, ಬಹಿಷ್ಕಾರ. "ಕೈಲಾಸಂ ಅವರು ಬರೆದ ಯಾವ ಗ್ರಂಥವನ್ನಾದರೂ ನಮ್ಮ ಜನ ಓದುತ್ತಿದ್ದಾರೆಂದರೆ ಜನರ ಮನಸ್ಸು ಆರೋಗ್ಯಸ್ಥಿತಿಯಲ್ಲಿದೆಯೆಂದು ನನಗೆ ದೃಢವಾಗುತ್ತದೆ. ಕೈಲಾಸಂ ಅವರ ಮುಖ್ಯ ಗುಣಗಳು - ಎರಡು. 1. ಹಾಸ್ಯ, 2. ಗಂಭೀರ. ಎರಡೂ ಮನಸ್ಸಿನ ಆರೋಗ್ಯದ ಲಕ್ಷಣಗಳು. ಹೀಗೆ ಉಭಯ ದೃಷ್ಟಿಗಳಿಂದಲೂ ಕೈಲಾಸಂ ಅವರ ನಾಟಕಗಳೂ, ಕಥೆಗಳೂ, ಸ್ನೇಹಸಂಭಾಷಣೆಗಳೂ ಉಲ್ಲಾಸಕಾರಿಯಾಗಿ, ಶೋಧನಕಾರಕವಾಗಿ ಗ್ರಾಹ್ಯಗಳಾಗಿರುತ್ತವೆ. ಗಂಭೀರ ವಿಚಾರ ಬೇಡವೆಂದರೂ, ಹಾಸ್ಯವು ಪ್ರಿಯವೆಂಬ ಕಾರಣದಿಂದಲಾದರೂ ನಮ್ಮ ಜನ ಕೈಲಾಸಂ ಅವರನ್ನು ಮೆಚ್ಚಿಕೊಂಡಿದ್ದಾರೆಂದು ನನಗೆ ಸಂತೋಷ".-ಡಿ.ವಿ.ಜಿ.

About the Author

ಟಿ.ಪಿ. ಕೈಲಾಸಂ
(26 July 1885 - 23 November 1946)

ಕನ್ನಡ ನಾಟಕರಂಗದಲ್ಲಿ ಹೊಸಶಕೆಯನ್ನು ಆರಂಭಿಸಿದ ಟಿ ಪಿ. ಕೈಲಾಸಂ ಅವರು ಬೆಂಗಳೂರಿನಲ್ಲಿ 26-07-1885ರಲ್ಲಿ ತ್ಯಾಗರಾಜ ಪರಮಶಿವ ಅಯ್ಯರ್ – ಕಲಮಮ್ಮ ದಂಪತಿಗಳ ಪುತ್ರರಾಗಿ ಜನಿಸಿದರು. ಬೆಂಗಳೂರು, ಹಾಸನ, ಮೈಸೂರುಗಳಲ್ಲಿ ಶಾಲಾ ಶಿಕ್ಷಣ ಮುಗಿಸಿ 1908ರಲ್ಲಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿ ಬಿ ಎ ಪದವಿಗಳಿಸಿದರು. ಪ್ರೌಢವ್ಯಾಸಂಗಕ್ಕೆ ಲಂಡನ್ನಿಗೆ ತೆರಳಿ 6 ವರ್ಷಗಳ ಕಾಲ ಭೂಗರ್ಭಶಾಸ್ತ್ರ ಅಭ್ಯಸಿಸಿ 1915ಕ್ಕೆ ಬೆಂಗಳೂರಿಗೆ ಹಿಂತಿರುಗಿದರು. ಭೂಗರ್ಭಶಾಸ್ತ್ರ ಇಲಾಖೆಯಲ್ಲಿ ಭೂಶೋಧಕರಾಗಿ ಸೇರಿ 5 ವರ್ಷ ಉದ್ಯೋಗ ಮಾಡಿದರು. ಅನಂತರ ರಾಜೀನಾಮೆ ನೀಡಿ ರಂಗಭೂಮಿಯ ಚಟುವಟಿಕೆಗಳಲ್ಲಿ ನಿರತರಾದರು. ವ್ಯಾಯಾಮಕ್ಕೆ ಹೆಚ್ಚು ಒತ್ತು ಕೊಟ್ಟಿದ್ದ ಕೈಲಾಸಂ ಕನ್ನಡ ...

READ MORE

Related Books