‘ಶರಣ ಕಿರಣ’ ಲೇಖಕ ಹ.ಸ. ಬ್ಯಾಕೋಡ ಅವರ ನಾಟಕ. ಈ ಕೃತಿಗೆ ಗೊ.ರು. ಚನ್ನಬಸಪ್ಪ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ..ಬ್ಯಾಕೋಡ ಅವರು ನಾಟಕದಲ್ಲಿ ಅತ್ಯಂತ ಸರಳ ಸಂಭಾಷಣೆಯನ್ನು ಬಳಸಿದ್ದು ಬದುಕಿನಲ್ಲೂ ಸರಳತೆ ಇರಬೇಕೆಂದು ಆಶಿಸಿದ್ದಾರೆ. ಹಾಗೆಯೇ ಬದುಕಿನಲ್ಲಿ ಎದುರಾಗುವ ಸವಾಲುಗಳನ್ನು ಸಮಚಿತ್ತದಿಂದ ಎದುರಿಸುವ ಆತ್ಮವಿಶ್ವಾಸ. ಅರ್ಥಹೀನ ಸಂಪ್ರದಾಯದ ಆಚರಣೆಗಳನ್ನು ಬಿಟ್ಟು ವೈಚಾರಿಕ ದೃಷ್ಟಿಯನ್ನು ಬೆಳೆಸಿಕೊಳ್ಳುವ ಮನೋಭಾವ. ಮಾನವ ಸಮಾನತೆ ಮತ್ತು ಘನತೆಗಳ ರಕ್ಷಣೆ. ಕೃತಕ ಜೀವನಕ್ಕೆ ಬದಲಾಗಿ ಸಹಜ ಜೀವನ, ವೈಯಕ್ತಿಕ ನಡೆ-ನುಡಿ ಸಮನ್ವಯ ಹೀಗೆ ಶರಣರು ಬದುಕಿದ ಮೌಲ್ಯಗಳನ್ನು ಲೇಖಕರು ಇಲ್ಲಿನ ಪಾತ್ರಗಳ ಸಂಭಾಷಣೆಗಳಲ್ಲಿ ಸಂಯೋಜಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ ಗೊ.ರು. ಚನ್ನಬಸಪ್ಪ.
ಲೇಖಕ ಹ.ಸ. ಬ್ಯಾಕೋಡ ಮಕ್ಕಳ ಸಾಹಿತ್ಯಕ್ಕೆ ಅರ್ಥಪೂರ್ಣ ಸತ್ವವನ್ನು ತಂದುಕೊಟ್ಟ ಸಾಹಿತಿ. ಇವರು ಪ್ರಸಿದ್ಧ ಛಾಯಾಗ್ರಾಹಕರೂ ಹೌದು. ಅಂತಾರಾಷ್ಟ್ರೀಯ ಮಟ್ಟದ ಹಲವು ಗೌರವಗಳಿಗೆ ಪಾತ್ರರಾಗಿರುವ ಬ್ಯಾಕೋಡ ಕರ್ನಾಟಕದ ಬಯಲುಸೀಮೆ ಪ್ರದೇಶದಲ್ಲಿ ಹುಟ್ಟಿ, ಕರಾವಳಿ ಪ್ರದೇಶದಲ್ಲಿ ಆಡಿ ಬೆಳೆದು, ಮಲೆನಾಡಿನ ಹಸಿರು ಪರಿಸರದ ಒಡನಾಟದಲ್ಲಿದ್ದವರು. ಸದ್ಯ ಬೆಂಗಳೂರಿನ ಹೊರವಲಯದಲ್ಲಿ ನೆಲೆಸಿದ್ದಾರೆ. ಅತ್ಯುತ್ತಮ ವನ್ಯಜೀವಿ ಛಾಯಾಗ್ರಾಹಕರು, ಲೇಖಕರು, ಪತ್ರಕರ್ತರೂ ಆಗಿರುವ ಬ್ಯಾಕೋಡ ಬಹುಮುಖ ಪ್ರತಿಭೆ. ಬಂಗಾರ, ರಜತ, ಕಂಚಿನ ಪದಕಗಳು, ಗೌರವ ಪ್ರಶಸ್ತಿಗಳು ಸೇರಿದಂತೆ ಐವತ್ತಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವನ್ಯಜೀವಿ ಛಾಯಾಚಿತ್ರ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಶ್ರೀಲಂಕಾ, ಹಾಂಗ್ ಕಾಂಗ್, ಮ್ಯಾಟ್ ಲ್ಯಾಂಡ್, ...
READ MORE