1928 ರಲ್ಲಿ ಮೊದಲ ಮುದ್ರಣ ಕಂಡಿದ್ದ ಅ.ನ.ಕೃಷ್ಣರಾಯರ ಪ್ರಹಸನ-ಮದುವೆಯೋ ಮನೆಹಾಳೋ ಅಥವಾ ಮುಪ್ಪಿನ ಮೋಹ. ಪ್ರಸ್ತುತ ಕೃತಿ 2ನೇ ಆವೃತ್ತಿ. ಈ ಮಧ್ಯೆ, ಈ ನಾಟಕವು ಅಂದಿನ ಕರ್ನಾಟಕದ ಬಹುಭಾಗದಲ್ಲಿ ಪ್ರದರ್ಶನಗೊಂಡು ಪ್ರೇಕ್ಷಕರ ಮನ ಗೆದ್ದಿತ್ತು. ಪಂಡಿತ ತಾರಾನಾಥರು ಮುನ್ನುಡಿ ಬರದು ‘ಈ ನಾಟಕವು ಸತ್ಯದ ಬುನಾದಿ ಹಾಕಲು ಇಚ್ಛಿಸುವವರಿಗೆ ಸ್ಫೂರ್ತಿ ನೀಡುತ್ತದೆ’ ಎಂದು ಪ್ರಶಂಸಿಸಿದ್ದರೆ ಸಾಹಿತಿ ಸಿ.ಕೆ.ವೆಂಕಟರಾಮಯ್ಯ ಅವರು ‘ವಿವಾಹ ಚಪಲದ ಶ್ರೀಮಂತ ವೃದ್ಧನಿಗೆ ಬುದ್ದಿ ಕಲಿಸುವ ವಿಡಂಬನಾತ್ಮಕ ನಾಟಕ ಪ್ರೇಕ್ಷಕರನ್ನು ರಂಜಿಸುತ್ತದೆ’ ಎಂದು ಶ್ಲಾಘಿಸಿದ್ದಾರೆ.
©2024 Book Brahma Private Limited.