ಕವಿ ಎಚ್. ಡುಂಡಿರಾಜ್ ಅವರ ‘ಕಾಯೋ-ಕಲ್ಪ ಮತ್ತು ಇತರ ನಾಟಕಗಳು’ ಕೃತಿಯು ಐದು ನಾಟಕಗಳ ಸಂಕಲನವಾಗಿದೆ. ಕೃತಿಯ ಕುರಿತು ನಾ. ದಾಮೋದರ ಶೆಟ್ಟಿ ಅವರು, ‘ಡುಂಡಿರಾಜರ ನಾಟಕವೆಂದರೆ ನಾಟಕವೆ ಅಲ್ಲ; ಅದೊಂದು ಕವಿತೆ ಅಥವಾ ಶಬ್ಧಜಾಲವಾಗಿದೆ. ಹಾಸ್ಯಪುಂಜ ಅಥವಾ ರಸಾನುಭವ, ಬದುಕು ಅಥವಾ ಕ್ರಿಯಾಭಿವ್ಯಕ್ತಿ ಎನ್ನುಬಹದು. ಅವರ ನಾಟಕಗಳು ಮೈದಾಳುವುದೇ ಹಾಗೆ’ ಎಂದು ಪ್ರಶಂಸಿಸಿದ್ದಾರೆ.
ಎಚ್. ಡುಂಡಿರಾಜ್, ಕನ್ನಡದ ಹೆಸರಾಂತ ಚುಟುಕು ಕಾವ್ಯ ಸಾಹಿತಿ. ಈವರೆಗೆ ಸುಮಾರು 45 ಪುಸ್ತಕಗಳನ್ನು ಬರೆದಿರುವ ಇವರು, ತಮ್ಮ ಪುಸ್ತಕಗಳಲ್ಲಿ ಚುಟುಕು ಸಾಹಿತ್ಯದ ಕುರಿತಾಗಿನ ಎಳೆಗಳನ್ನು ಸೂಕ್ಷ್ಮವಾಗಿ ಬಿಡಿಸಿಟ್ಟಿದ್ದಾರೆ. ಸಾಹಿತ್ಯ ಮತ್ತು ಹಾಸ್ಯದ ಸಮ್ಮಿಲನ ಇವರ ಕೃತಿಗಳ ವಿಶೇಷತೆ. ಉಡುಪಿ ಜೆಲ್ಲೆಯ ಹಟ್ಟಿಕುದ್ರುವಿನಲ್ಲಿ 18 ಆಗಸ್ಟ್ 1956ರಲ್ಲಿ ಜನಿಸಿದ ಇವರು, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ. ಪದವಿಯನ್ನು ಪಡೆದಿದ್ದಾರೆ. ಸದ್ಯಕ್ಕೆ ಮಂಗಳೂರಿನ ಕಾರ್ಪೋರೇಶನ್ ಬ್ಯಾಂಕ್‍ನ ಸಹಾಯಕ ಮಹಾ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಾ ಇದ್ದಾರೆ. 2011ರಲ್ಲಿ ನಡೆದ ಸಂಯುಕ್ತ ಅರಬ್ ಸಂಸ್ಥಾನದ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಇವರು, ...
READ MORE