ಕರ್ನಾಟಕ ಮತ್ತು ಅದರ ಚರಿತ್ರೆಯನ್ನು ಬಲ್ಲವರಿಗೆ ಬಸವ, ವಿಜಯನಗರ, ಟಿಪ್ಪು ಪ್ರಮುಖ ಘಟ್ಟಗಳು ಎಂದು ವಿವರಿಸಿ ಹೇಳಬೇಕಿಲ್ಲ. ಬಸವ ಮತ್ತು ಟಿಪ್ಪು ಬಗ್ಗೆ ನಾಟಕ ಬರೆದಿದ್ದ ಕಾರ್ನಾಡ್ ವಿಜಯನಗರದ ಪತನದ ವಸ್ತುವನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಟ್ರೈಲಾಜಿಯನ್ನು ಪೂರ್ಣಗೊಳಿಸಿದ್ದಾರೆ. ಕಾಲದ ದೃಷ್ಟಿಯಿಂದ ಮಾತ್ರವಲ್ಲದೆ ಗುಣಮಟ್ಟದ ಕಾರಣದಿಂದಲೂ ’ರಾಕ್ಷಸ ತಂಗಡಿ’ಯು ಉಳಿದೆರಡು ನಾಟಕಗಳ ಮಧ್ಯೆ ನಿಲ್ಲುತ್ತದೆ. ರಾಕ್ಷಸ ತಂಡಗಿಯಲ್ಲಿ ಕಾರ್ನಾಡರು ನಾಟಕ ಕಟ್ಟುವ ಪ್ರಕ್ರಿಯೆಯಲ್ಲಿ ಯಶಸ್ವಿಯಾಗಿದ್ದಾರೆ. ಅದಕ್ಕಾಗಿ ಅವರ ಅನುಭವ ಮತ್ತು ಕಸುಬುಗಾರಿಕೆಗಳೆರಡೂ ದುಡಿದಿವೆ. ನಾಟಕ ಓದುವಾಗ ಕಾರ್ನಾಡರ ಪರಿಶ್ರಮವೂ ಕಾಣಿಸದೇ ಇರದು. ’ರಾಕ್ಷಸ ತಂಗಡಿ’ಯು ಇನ್ನೂ ರಂಗದ ಮೇಲೆ ಬಂದಿಲ್ಲ. ಹೀಗಾಗಿ ರಂಗದ ಮೇಲೆ ಉಂಟು ಮಾಡುವ ಪರಿಣಾಮದ ಬಗ್ಗೆ ಈಗಲೇ ಏನನ್ನೂ ಹೇಳಲಾಗುವುದಿಲ್ಲ. ಆದರೆ, ಇದು ರಂಗದ ಮೇಲೆ ಸೋಲಬಹುದಾದ ನಾಟಕವಂತೂ ಖಂಡಿತ ಅಲ್ಲ. ಆದರೆ, ಸಾಹಿತ್ಯ ಕೃತಿಯಾಗಿ ಕಾರ್ನಾಡರ ಹಿಂದಿನ ದಾಖಲೆಗಳನ್ನು ಮುರಿಯುವುದಿಲ್ಲ. ಅವಿರತ ಪ್ರಯತ್ನದ ನಂತರವೂ ಕಾರ್ನಾಡರ ಮಾಂತ್ರಿಕ ಸ್ಪರ್ಶ ’ರಾಕ್ಷಸ ತಂಗಡಿ’ಗೆ ಪ್ರಾಪ್ತವಾಗಿಲ್ಲ.
1565ರಲ್ಲಿ ಜರುಗಿದ ರಕ್ಕಸಗಿ-ತಂಗಡಗಿ ಕಾಳಗದಲ್ಲಿ ಒಂದೇ ಒಂದು ದಿನದ ಅವಧಿಯಲ್ಲಿ ಅದ್ವಿತೀಯ ಸಮೃದ್ಧಿಯ ಹಂಪಿ ನಗರ ಹೊತ್ತಿ ಉರಿದು ಬೂದಿಯಾಯಿತು. ತನ್ನ ಸಾಮರ್ಥ್ಯ-ಐಶ್ವರ್ಯಗಳಂದ ಜಗತ್ತನ್ನು ಬೆರಗುಗೊಳಿಸಿದ ವಿಜಯನಗರ ಸಾಮ್ರಾಜ್ಯ ಮಣ್ಣು ಮುಕ್ತಿ ನಿರ್ನಾಮವಾಯಿತು. ಈ ಕರಾಳ ಘಟನಾ ಚಕ್ರದ ಕೇಂದ್ರದಲ್ಲಿ ನಿಂತಿದ್ದ ’ಅಳಿಯ ರಾಮರಾಯ' – ಸೇನಾನಿ, ಮುತ್ಸದ್ದಿ. ಸಿಂಹಾಸನವಿಲ್ಲದ ಚಕ್ರವರ್ತಿ, ಪರಂಪರೆಯಿಲ್ಲದ ಚಾಲುಕ್ಯ ವಂಶಕ್ಕೆ ಒಪ್ಪಿಗೆಯಾಗದ ಆಳಿಯ - ಭಾರತದ ಇತಿಹಾಸದಲ್ಲೇ ಅನ್ಯಾದೃಶವಾಗಿರುವ ಈ ವ್ಯಕ್ತಿಯ ದುರಂತವನ್ನು ಅರ್ಥೈಸಲು ಯತ್ನಿಸುವ ನಾಟಕ ಇದು.
Why I wrote Rakshasa Tangadi? Girish Karnad | ನಾನೇಕೆ ರಾಕ್ಷಸ ತಂಗಡಿ ಬರೆದೆ?-ಗಿರೀಶ್ ಕಾರ್ನಾಡ್
©2025 Book Brahma Private Limited.