‘ಎರಡು ಏಕಾಂಕಗಳು’ ಚಿ.ಶ್ರೀನಿವಾಸರಾಜು ಅವರ ನಾಟಕವಾಗಿದೆ. ಸಾವು ಮತ್ತು ಅದರ ಸುತ್ತ ಸಮಾಜದ ದೃಷ್ಟಿಕೋನಗಳು ಎಲ್ಲೆಲ್ಲಿ ಹೇಗಿವೆ ? ಮತ್ತು ಹೆಣದೊಂದಿಗೆ ಹಣದ ಸಂಬಂಧ ಎಷ್ಟುಗಾಢವಾಗಿರುತ್ತದೆ ಎನ್ನುವುದನ್ನು "ಇದು ಕಾರಣ'' ನಾಟಕ ಧ್ವನಿಸುತ್ತದೆ.
ಕನ್ನಡಕ್ಕಾಗಿ ಶ್ರಮಿಸಿದ, ಯುವ ಪ್ರತಿಭೆಗಳ ಪಡೆಯನ್ನೇ ಸೃಷ್ಟಿಸಿ ಕನ್ನಡದ ಕಂಪು ಹೊಸ ತಲೆಮಾರಿಗೂ ತಲುಪುವಂತೆ ದುಡಿದ ಸಾಹಿತಿ ಚಿ. ಶ್ರೀನಿವಾಸರಾಜು. ಮೇಷ್ಟ್ರು ಎಂದೇ ಖ್ಯಾತರು. ಚಿಕ್ಕಬಳ್ಳಾಪುರದಲ್ಲಿ ಜನಿಸಿದರು. ತಂದೆ ವಿ. ಚಿಕ್ಕರಾಜು, ತಾಯಿ- ಸಾವಿತ್ರಮ್ಮ. ಆರಂಭಿಕ ಶಿಕ್ಷಣವನ್ನು ಚಿಕ್ಕಬಳ್ಳಾಪುರದಲ್ಲಿಯೇ ಪಡೆದು, ಹೈಸ್ಕೂಲು ಓದುವಾಗ ‘ಶಾಲು ಜೋಡಿಗಳು’ ಎಂಬ ನಾಟಕ ರಚಿಸಿದ್ದರು. ಆನಂತರದಲ್ಲಿ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಬಿ.ಎಸ್ಸಿ. ಓದಿದ್ದು, ಕೆಲಕಾಲ ಲೋಹ ವಿಕಾಸ ಮಂಡಲಿಯಲ್ಲಿ ಸಾರಿಗೆ ಅಧಿಕಾರಿಯಾಗಿದ್ದರು. ‘ಛಸನಾಲ ಬಂಧು’ ಕವನ ಸಂಕಲನ ಪ್ರಕಟಿಸಿದ್ದರು. ಮತ್ತೆ ಓದುವ ಹಂಬಲದಿಂದ ಬಿ.ಎ, ಎಂ.ಎ. ಪದವಿ ಪಡೆದು, ಇಂಡಾಲಜಿಯಲ್ಲಿ ಡಿಪ್ಲೊಮಾ ಪದವಿ ಪಡೆದರು. ಸೆಂಟ್ರಲ್ ಕಾಲೇಜಿನ ಕನ್ನಡ ...
READ MOREಹೊಸತು- ಡಿಸೆಂಬರ್ -2003
ಸಾವು ಮತ್ತು ಅದರ ಸುತ್ತ ಸಮಾಜದ ದೃಷ್ಟಿಕೋನಗಳು ಎಲ್ಲೆಲ್ಲಿ ಹೇಗಿವೆ ? ಮತ್ತು ಹೆಣದೊಂದಿಗೆ ಹಣದ ಸಂಬಂಧ ಎಷ್ಟುಗಾಢವಾಗಿರುತ್ತದೆ ಎನ್ನುವುದನ್ನು "ಇದು ಕಾರಣ'' ನಾಟಕ ಧ್ವನಿಸುತ್ತದೆ. ಯುದ್ಧಗಳನ್ನು ಒಂದು ಸಮಾರಂಭ ಏರ್ಪಡಿಸುವಂತೆ ನೋಡಿಕೊಳ್ಳುವ ಅಧಿಕಾರಿ ವರ್ಗದ ಸುತ್ತ ಹೆಣೆದ ಇನ್ನೊಂದು ನಾಟಕದಲ್ಲಿ ಮನುಷ್ಯರಿಗಿಂತ ಗಡಿಗಳೇ ಪ್ರಾಮುಖ್ಯವೆನ್ನುವ ಕ್ರೂರ ವ್ಯವಸ್ಥೆಯ ಬಿಂಬ ಕಾಣುತ್ತದೆ. ಒಟ್ಟಿನಲ್ಲಿ ಇಂದಿನ ಸಂದರ್ಭಕ್ಕೆ ಹತ್ತಿರವಾದ ಎರಡು ಅಮೂಲ್ಯ ನಾಟಕಗಳನ್ನು ರಚಿಸಿ ನಮ್ಮೆಲ್ಲರ ಗೌರವಕ್ಕೆ ಚಿ. ಶ್ರೀನಿವಾಸರಾಜು ಪಾತ್ರರಾಗುತ್ತಾರೆ.