‘ದಿಂಡಿ’ ಲೇಖಕ ಚಂದ್ರಕಾಂತ ಕುಸನೂರ ಅವರ ನಾಟಕ. ಮಹಾರಾಷ್ಟ್ರದ ಭಕ್ತಿ ಸಂಪ್ರದಾಯದಲ್ಲಿ ವಾರಕರಿ ಪಂಥಕ್ಕೆ ಬಹಳ ಮಹತ್ವವಿದೆ. ಈ ಪಂಥದಲ್ಲಿ ಜಾತಿ ಮತಕ್ಕೆ ಸ್ಥಾನವಿಲ್ಲ. ಇಲ್ಲಿ ದೊಡ್ಡವರು ಸಣ್ಣವರೆಂಬ ಅಂತಸ್ತುಗಳಿಲ್ಲ. ಇವರೆಲ್ಲರೂ ಪಂಢರಿಪುರದ ಪಾಂಡುರಂಗನ ಭಕ್ತರು. ಸಾತ್ವಿಕ ಜೀವನವನ್ನು ಸಾಗಿಸಿಕೊಂಡು ಹೋಗುವವರು, ನಿತ್ಯ ಧ್ಯಾನ, ಮನನ, ಚಿಂತನ, ಕೀರ್ತನ, ಭಜನೆಯಲ್ಲಿ ಸಮಯ ಕಳೆಯವವರು. ಆಷಾಢ ಮತ್ತು ಕಾರ್ತಿಕ ಏಕಾದಶಿಗೆ ಆ ಜನರು ಪಂಢರಪುರದ ಯಾತ್ರೆಗೆ ಹೊರಡುತ್ತಾರೆ. ಈ ಯಾತ್ರೆಯನ್ನು ದಿಂಡಿ ಎನ್ನುತ್ತಾರೆ.
ಊರು ಕೇರಿಗಳಿಂದ ತಂಡಗಳನ್ನು ಕಟ್ಟಿಕೊಂಡು ಕೈಯಲ್ಲಿ ತಾಳ, ಕೊರಳಿಗೆ ಮೃದಂಗ ಸಿಕ್ಕಿಸಿಕೊಂಡು ಹೊರಡುತ್ತಾರೆ. ಹಣೆಯ ಮೇಲೆ ಗಂಧಾಕ್ಷತೆ, ಕೊರಳಲ್ಲಿ ತುಳಸಿಮಾಲೆ, ಭುಜದ ಮೇಲೆ ಚಿಕ್ಕದೊಂದು ಕಾವಿ ಧ್ವಜ ಬಹುತೇಕ ಎಲ್ಲರ ಮೈ ಮೇಲೆ ಕಾವಿ ಜುಬ್ಬ - ಪಂಚೆ, ತಂಡಕ್ಕೊಂದು ಪಲ್ಲಕ್ಕಿ, ಅದರಲ್ಲಿ ಅವರ ಆರಾಧ್ಯಮೂರ್ತಿ ಅಥವಾ ಫೋಟೋ . ಎಲ್ಲ ವಯಸ್ಸಿನ ಭಕ್ತರು ಹಾಡುತ್ತಾ ಕುಣಿಯುತ್ತಾ ಸಾಗುವ ಈ ಯಾತ್ರೆಯೇ ಈ ಕೃತಿ ರಚನೆಗೆ ಪ್ರೇರಕ. ಅಲ್ಲಿಯ ಮಾತು ಕತೆ, ಜನರ ವರ್ತನೆ ಎಲ್ಲವನ್ನು ಹಾಸ್ಯ ರೂಪಕದಲ್ಲಿ ಒಂದು ನಗೆ ನಾಟಕವನ್ನು ನೀಡಿದ್ದಾರೆ.
©2024 Book Brahma Private Limited.