ಬಿ. ಸುರೇಶ ಅವರ 'ಅಡುಗೆ ಮನೆಯಲ್ಲೊಂದು ಹುಲಿ' ಒಂದು ಸುಳ್ಳಿನ ಆಟವನ್ನು ಅನಾವರಣ ಮಾಡಿಕೊಡುವಂತಹ ನಾಟಕ. ಹಾಗೆ ನೋಡಿದರೆ 'ನಾಟಕ' ಎನ್ನುವುದೇ ಒಂದು ಸುಳ್ಳಿನ ಆಟ. ಆದರೆ ಈ ಆಟ ಸುಳ್ಳಿನ ಮೂಲಕವೇ ಸತ್ಯವನ್ನು ಶೋಧಿಸುವಂತದ್ದು. ಹೀಗೆ ಸುಳ್ಳಿನ ಮುಖಾಂತರ ನಮ್ಮ ಸಮಾಜದ ಅನೇಕ ಸತ್ಯಗಳನ್ನು ಹುಡುಕುವ ಒಂದು ಅಪರೂಪದ ನಾಟಕ 'ಬಿ.ಸುರೇಶರ ಅಡುಗೆ ಮನೆಯಲ್ಲೊಂದು ಹುಲಿ ಈಗ ಪುಸ್ತಕದ ರೂಪದಲ್ಲಿ ಓದುಗರ ಕೈ ಸೇರಿದೆ.
ರಂಗಭೂಮಿ ಕಲಾವಿದ, ನಾಟಕಕಾರ, ನಿರ್ದೇಶಕರಾಗಿಯೂ ಗುರುತಿಸಿಕೊಂಡಿರುವ ಬಿ. ಸುರೇಶ, 1962ರಲ್ಲಿ ದಾವಣಗೆರೆಯಲ್ಲಿ ಜನಿಸಿದರು. ಹಿರಿಯ ಪತ್ರಕರ್ತೆ ಹಾಗೂ ಲೇಖಕಿ ವಿಜಯಾ ಅವರ ಪುತ್ರ. ಬಿ.ಸುರೇಶ ಅವರು 1973ರಿಂದಲೇ ಬಾಲನಟರಾಗಿ ಹವ್ಯಾಸಿ ರಂಗಭೂಮಿಯಲ್ಲಿ ಕಾಣಿಸಿಕೊಂಡು ಈವರೆಗೂ ಸಕ್ರಿಯ ರಂಗಕರ್ಮಿಯಾಗಿದ್ದಾರೆ. ಅಲ್ಲದೇ, 1976 ರಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ಘಟಶ್ರಾದ್ದ ಚಿತ್ರದಲ್ಲಿ ಬಾಲನಟರಾಗಿ ಕಾಣಿಸಿಕೊಳ್ಳುವ ಮೂಲಕ ಇವರ ಚಿತ್ರರಂಗದ ಬದುಕು ಪ್ರಾರಂಭವಾಯಿತು. 1988 ರಲ್ಲಿ ಮಿಥಿಲೆಯ ಸೀತೆಯರು ನಿರ್ದೇಶನ ಮಾಡಿದ ಅವರು ಚಿತ್ರಕಥೆ, ಸಂಭಾಷಣೆ ಬರೆಯುತ್ತಾ 15 ಕ್ಕೂ ಹೆಚ್ಚಿನ ಚಿತ್ರಗಳಿಗೆ ಸಂಭಾಷಣೆ ರಚಿಸಿದ್ದಾರೆ. ’ಅರ್ಥ’ ಚಿತ್ರಕ್ಕಾಗಿ ಬಿ.ಸುರೇಶ ಅವರಿಗೆ 2002-2003 ...
READ MORE