‘ಬೆಳ್ಳಕ್ಕಿಸಾಲು’ ಲೇಖಕ ಡಾ. ಬಸವರಾಜ ಸಬರದ ಅವರ ನಾಟಕ. ಈ ಕೃತಿಗೆ ರಂಗಕರ್ಮಿ ಎಸ್. ಮಾಲತಿ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ಇದೊಂದು ಸುಂದರವಾದ ಗೀತ ನಾಟಕ. ಈ ನಾಟಕದಲ್ಲಿ ಪ್ರಕೃತಿ ಮಹತ್ವದ ಪಾತ್ರವಹಿಸುತ್ತದೆ. ಒಂದೆಡೆ ದರ್ಪ, ದಬ್ಬಾಳಿಕೆ, ವಿಷಯ ಲಂಪಟತೆ, ವೈಭವಗಳಿದ್ದರೆ, ಇನ್ನೊಂದೆಡೆ ಬಳ್ಳಿಗಾಶ್ರಯವಾದ ಮರಗಳು, ಗಿಳಿ, ಬೆಳ್ಳಕ್ಕಿಸಾಲು, ಹೊಳೆ ಹಳ್ಳಗಲು, ಗುಡ್ಡ ಬೆಟ್ಟಗಳು, ಕೇದಿಗೆಯ ಬನದಲ್ಲಿ ಸಂಚರಿಸುವ ಕವಿ ಮತ್ತು ರಾಜಕುಮಾರಿಯರಿದ್ದಾರೆ. ಪ್ರೀತಿಯಂತಹ ಮೌಲ್ಯಕ್ಕಾಗಿ ಸ್ವಯಂವರವನ್ನೇ ದಿಕ್ಕರಿಸುವ ರಾಜಕುಮಾರಿ, ತನ್ನನ್ನೇ ಅರ್ಪಿಸಿಕೊಳ್ಳುವ ಕವಿ ಗಮನ ಸೆಳೆಯುತ್ತಾರೆ. ಪ್ರಕೃತಿಯಲ್ಲಿ ಕವಿಯ ನಿರಂತರತೆಯನ್ನು ಗುರುತಿಸಿರುವ ಡಾ. ಸಬರದ ಅವರು ತುಂಬ ಕಾವ್ಯಾತ್ಮಕವಾಗಿ ಈ ನಾಟಕವನ್ನು ರಚಿಸಿದ್ದಾರೆ. ರಂಗದ ಹೊಸ ಸಾಧ್ಯತೆಗಳನ್ನಳವಡಿಸಿಕೊಳ್ಳುವಲ್ಲಿ ನಾಟಕ ಚಾಲೇಂಜನ್ನು ನೀಡುತ್ತದೆ’ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
©2024 Book Brahma Private Limited.