ಏಕಾಂಕ ನಾಟಕಗಳನ್ನು ಬರೆಯುವುದರಿಂದಲೇ ಬರವಣಿಗೆ ಆರಮಭಿಸಿದ ಎನ್ಕೆ ಕುಲಕರ್ಣಿಯವರ ಏಕಾಂಕಗಳ ಸಂಕಲನ ಇದು. ಜೀವನದ ಉಜ್ವಲ ಸಮಸ್ಯೆಗಳನ್ನು ತೀಕ್ಷ್ಣತೆಯಿಂದ, ಗಮಭೀರತೆಯಿಂದ ಬಿಡಿಸುವ ಯತ್ನ ಇಲ್ಲಿ ಕಂಡುಬರಲಿಕ್ಕಿಲ್ಲ. ಹಾಸ್ಯವೇ ಇಲ್ಲಿನ ಏಕಾಂಕಗಳ ಜೀವಾಳ ಎಂದು ಎನ್ಕೆಯವರೇ ಹೇಳಿಕೊಂಡಿದ್ದಾರೆ. ನಾಟ್ಯಭೂಮಿಯ ಪುನರ್‍ರಚನೆಯಾಗಬೇಕಾದ ಕಾಲವಿದು. ಆದರೆ ಆ ಮಂತ್ರ ತಂತ್ರ ಈ ಏಕಾಂಕಗಳಲ್ಲಿದೆಯೆಂಬ ಹೆಗ್ಗಳಿಕೆ ಈ ನಾಟಕಕಾರನಲ್ಲಿಲ್ಲ ಎಂಬ ವಿನಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಎನ್ಕೆ (ಎನ್.ಕೆ. ಕುಲಕರ್ಣಿ) ಅವರು ಎನ್.ಕೆ , ಎಂದೇ ಸುಪ್ರಸಿದ್ಧರಾದ ಎ.ಕೆ.ಕುಲಕರ್ಣಿಯವರು, 1913 ರ ಆಗಸ್ಟ್ 29 ರಂದು ಗದುಗಿನಲ್ಲಿ ಜನಿಸಿದರು. ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಎ .(ಕನ್ನಡ ಆನರ್ಸ್) ಪದವಿಯನ್ನು ಹಾಗು ವಿದ್ಯಾರಣ್ಯ ಪಾರಿತೋಷಕವನ್ನು ಪಡೆದರು.1938 ರಲ್ಲಿ ಕನ್ನಡ ಹಾಗೂ ಸಂಸ್ಕೃತದಲ್ಲಿ ಎಂ.ಎ. ಪದವಿಯನ್ನು ಪಡೆದರು. 1940 ರಲ್ಲಿ ಬಿ.ಟಿ. ಪದವಿ ಪಡೆದರು. 1943 ರಿಂದ 1946 ರವರೆಗೆ ಕನ್ನಡ ಸಂಶೋಧನ ಸಂಸ್ಥೆಯಲ್ಲಿ ಕುಮಾರವ್ಯಾಸನ ಕುರಿತು ಸಂಶೋಧನೆ ಮಾಡಿ ಪ್ರಬಂಧರಚನೆ ಮಾಡಿದರು. 1971 ರಲ್ಲಿ ಧಾರವಾಡ ಆಕಾಶವಾಣಿಯಿಂದ ಕಾರ್ಯಕ್ರಮ ನಿರ್ವಾಹಕರಾಗಿ ನಿವೃತ್ತರಾದರು. ಸಾವಿನ ಉಡಿಯಲ್ಲಿ, ಎರಡನೆಯ ...
READ MORE