ಲೇಖಕ ಟಿ.ಪಿ.ಕೈಲಾಸಂ ಅವರ ಕೃತಿ-ನಮ್ಮ್ ಬ್ರಾಹ್ಮಣ್ಕೆ. ಸಾಹೇಬ್ರು (ಹೈಕೋರ್ಟ್ ಜಡ್ಜು), ಪುತ್ರ ಕಿಟ್ಟು, ಪುತ್ರಿ ಸರೋಜಾ, ವೈಢೂರ್‍ಯಂ, ಹಸ್ಸನ್ ಅಲಿ, ಶಾಸ್ತ್ರಿ, ನಾರಾಯಣ, ಯಾಲಕ್ಕಿ (ನಾಯನ್ದ) ಇಂತಹ ಪಾತ್ರಗಳ ಮೂಲಕ ಬ್ರಾಹ್ಮಣ ಕುಲ ಗೌರವ ಪರಂಪರೆಯಿಂದ ಪರಂಪರೆಗೆ ಹೇಗೆ ಗೌರವ ಕಡಿಮೆಯಾಗುತ್ತಾ ಬಂದಿದೆ ಎಂಬುದನ್ನು ಹಾಸ್ಯಮಯವಾಗಿ ಅಷ್ಟೇ ಸಾಂಕೇತಿಕವಾಗಿ ಸೂಚಿಸುವ ಮೂಲಕ ಮನುಷ್ಯ ವರ್ತನೆಯನ್ನು ರೂಢಿಸಿಕೊಳ್ಳಬೇಕು ಎಂಬ ಸೂಚ್ಯಾರ್ಥ ನೀಡುವುದು ಈ ನಾಟಕದ ಹೂರಣ. ಹಾಸ್ಯದ ಮೂಲಕ ಸಮಾಜದ ಲೋಪ-ದೋಷಗಳನ್ನು ತೋರಿಸುವ ಈ ನಾಟಕ ಒಂದರ್ಥದಲ್ಲಿ ಕ್ರಾಂತಿಯ ಬೀಜಗಳನ್ನು ಒಡಲಲ್ಲಿಟ್ಟುಕೊಂಡಿದೆ.
©2024 Book Brahma Private Limited.