‘ಒಂದು ಕಾನೂನಾತ್ಮಕ ಕೊಲೆ’ ಕೃತಿಯು ಶಿವಕುಮಾರ ಮಾವಲಿ ಅವರ ನಾಟಕ ಸಂಕಲನವಾಗಿದೆ. ನಾಟಕ ರೂಪದಲ್ಲಿ ಈಗಾಗಲೇ ಹಲವು ಪ್ರದರ್ಶನವನ್ನು ಕಂಡ ‘ಒಂದು ಕಾನೂನಾತ್ಮಕ ಕೊಲೆ’ ಈ ಕಾಲಕ್ಕೆ ಅಲ್ಲದೆ ಮುಂದಿನ ಅನೇಕ ಕಾಲಕ್ಕೆ ಸಲ್ಲಬಹುದಾದ ಸಂಕಲನ. ಸರ್ಕಾರ-ಮನುಷ್ಯರು, ಮನುಷ್ಯರು-ಮನುಷ್ಯರ ನಡುವಿನ ಸಂಬಂಧ ಮತ್ತು ಸಂಘರ್ಷಗಳನ್ನು ಒಳಗೊಂಡಿರುವ ಈ ನಾಟಕವನ್ನು ಅಭಿನಯಿಸುವುದರ ಜೊತೆಗೆ ಓದಲು ಕೂಡ ಬಹಳಷ್ಟು ಕುತೂಹಲಕಾರಿಯಾಗಿದೆ. ವಿಜ್ಞಾನ- ತಂತ್ರಜ್ಞಾನಗಳ ಬೆಳವಣಿಗೆ ಮನುಷ್ಯನಲ್ಲಿ ಅಭಿವೃದ್ಧಿಯ ಬಗ್ಗೆ ಜಾಗೃತ ಮನಸ್ಸನ್ನು ಉಂಟು ಮಾಡುತ್ತಿರುವುದು ಎಷ್ಟು ಸತ್ಯವೋ, ಮನುಷ್ಯ ತನ್ನಂತೆಯೇ ಇರುವ ಮನುಷ್ಯನ ಮೇಲೆ ದ್ವೇಷ, ಮತ್ಸರ ಸಾಧಿಸಲು ಸಜ್ಜಾಗುವುದೂ ಅಷ್ಟೇ ಸತ್ಯವಾಗಿದೆ. ತೀರ ಕ್ಷುಲ್ಲಕ ಎನಿಸುವ ಕಾರಣಗಳಿಗೂ ಹಿಂಸೆಯತ್ತ ಸಾಗುತ್ತಿರುವ ಸಮಯದಲ್ಲಿ ‘ಕೊಂದವರುಳಿದರೆ ಕೂಡಲಸಂಗಮದೇವಾ’ ಎಂಬ ಬಸವಣ್ಣನವರ ವಚನದ ಸಾಲನ್ನು ದ್ರವ್ಯವಾಗಿ ಹೊಂದಿರುವ ಈ ನಾಟಕ ಹೆಚ್ಚು ಜನರನ್ನು ತಲುಪಬಹುದು.
ಒಂದು ಕಾನೂನಾತ್ಮಕ ಕೊಲೆ(ಅವಧಿ)
©2024 Book Brahma Private Limited.