‘ಧ್ಯಾನ ಭಾರತಿ’ ತಿರುಕ ಅವರ ಏಕಪಾತ್ರಾಭಿನಯ ಕೃತಿಯಾಗಿದೆ. ಕೃತಿಯ ಸನ್ನಿವೇಶ ಹೀಗಿದೆ: ಭಾರತ ಮಾತೆಯು ಚಿಂತಾಕ್ರಂತಳಾಗಿ ಪರ್ವತಶ್ರೇಣಿಯ ಒಂದು ಹಾಸು ಬಂಡೆಯ ಮೇಲೆ ಕುಳಿತಿರುವಳು ; ಅವಳಿಗೆ ಹೊರಗಿನ ಪ್ರಪಂಚದ ಅರಿವೇ ಇದ್ದಂತಿಲ್ಲ. ಹರಿದು ಜೋಡಿಸಿದ ಬಟ್ಟೆ; ಅಲ್ಲಲ್ಲಿ ಛಿದ್ರವಾಗಿದೆ. ತಲೆಯ ಮೇಲೆ ಕಿರೀಟವಿದ್ದರೂ ಭಿನ್ನ ವಾದಂತಿದೆ..ಸ್ವಲ್ಪ ಹೊತ್ತು ಮನ....ಸ್ಮಶಾನಮಾನ, ಆಗ ಸುತ್ತಲಿಂದ ಈ ಮೌನವನ್ನು ಭೇದಿಸಿ ವಂದೇಮಾತರಂ ಗೀತೆಯೂ ಜತೆಯಲ್ಲೇ ಪ್ರಚಂಡ ಜಯಘೋಷವೂ ಕೇಳಿಬರುತ್ತದೆ. ವಂದೇಮಾತರಂ. ಭಾರತಮಾತಾಕೀ ಜೈ.... ಹಿಂದ್ ಮಾತಾಕೀ ಜೈ.... ಜೈ ಹಿಂದ್.... ಜೈ ಭಾರತ !....
©2024 Book Brahma Private Limited.